alex Certify ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಬರುವವರು 24 ಸಾವಿರ ರೂ. ನೀಡೋದು ಕಡ್ಡಾಯ…! ವಧು ಇಟ್ಟ ಬೇಡಿಕೆ ಕೇಳಿ ದಂಗಾದ ಅತಿಥಿಗಳು

ಜಗತ್ತಿನಲ್ಲಿ ವಿಚಿತ್ರವಾದ ವಿವಾಹ ಪದ್ಧತಿಗಳಿವೆ ಮತ್ತು ಅವು ನಮ್ಮನ್ನು ಬೆರಗುಗೊಳಿಸುತ್ತವೆ. ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಬೆತ್ತ ಅಥವಾ ಒಣಗಿದ ಮೀನಿನಿಂದ ವರನ ಪಾದಗಳಿಗೆ ಹೊಡೆಯುವ ವಿಚಿತ್ರ ಪದ್ಧತಿ ಇದೆ. ಆದರೆ ಈ ವಧು-ವರರು ವಿಭಿನ್ನ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಪ್ರತಿಯೊಬ್ಬ ಅತಿಥಿಯು ಮದುವೆಗೆ ಉಡುಗೊರೆಯಾಗಿ £ 250 (ರೂ. 24,200) ತರುವಂತೆ ಕೇಳಿಕೊಂಡಿದ್ದಾಳೆ !

ರೆಡ್ಡಿಟ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಪೋಸ್ಟ್ ಮಾಡಿರುವ ವಧುವಿನ ಸ್ನೇಹಿತೆ, ಆಶೀರ್ವಾದವೆಯೇ ಉಡುಗೊರೆಯ ಬದಲು, ಹಣವೇ ಉಡುಗೊರೆ ಎಂದು ಹೇಳಿದ್ದು, ಮದುವೆಗೆ ಬರುವವರು ದುಡ್ಡು ಕೊಡುವಂತೆ ಕೇಳಿಕೊಂಡಿರುವ ಬಗ್ಗೆ ತಿಳಿಸಿದ್ದಾಳೆ.

“ನಾನು ವಧು-ವರರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಸ್ನೇಹ ಹೊಂದಿದ್ದೇನೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಮದುವೆ ನಡೆಯಲಿದೆ. ಉಡುಗೊರೆ ರೂಪದಲ್ಲಿ ಹಣ ತರುವಂತೆ ಸ್ನೇಹಿತೆ ಹೇಳಿದ್ದಾಳೆ. ಇದರಿಂದ ಆಘಾತಕ್ಕೊಳಗಾಗಿದ್ದೇನೆ, ಏಕೆಂದರೆ ಮೊತ್ತವು ಬಹಳ ದುಬಾರಿಯಾಗಿದೆ. ಈ ಬಗ್ಗೆ ಸ್ನೇಹಿತೆಯನ್ನು ಕೇಳಿದಾಗ ಇದು ತಮಾಷೆಯಲ್ಲ, ಕಡ್ಡಾಯ. ಹಣ ತರದಿದ್ದರೆ ಮದುವೆಗೆ ಎಂಟ್ರಿ ಇಲ್ಲ ಎಂದಿದ್ದಾಳೆ” ಎಂದು ಸ್ನೇಹಿತೆ ಬರೆದುಕೊಂಡಿದ್ದಾಳೆ.

ವಧು ಬೆಲ್ಜಿಯಂನವಳಾಗಿದ್ದು, ಅಲ್ಲಿ ಹೀಗೆ ಹಣ ನೀಡುವುದು ಮಾಮೂಲಂತೆ. ಅದಕ್ಕಾಗಿಯೇ ನಾನು ಹೀಗೆ ಡಿಮಾಂಡ್​ ಇಟ್ಟಿರುವುದಾಗಿ ಹೇಳಿದ್ದಾಳೆ. ಒಟ್ಟಿನಲ್ಲಿ ಈ ಪೋಸ್ಟ್​ ಭಾರಿ ವೈರಲ್​ ಆಗಿದ್ದು, ಜನ ಹುಬ್ಬೇರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...