alex Certify ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಆಘಾತ, ಮೊದಲ ರಾತ್ರಿಯೇ ನಡೆದಿದೆ ನಡೆಯಬಾರದ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಆಘಾತ, ಮೊದಲ ರಾತ್ರಿಯೇ ನಡೆದಿದೆ ನಡೆಯಬಾರದ ಘಟನೆ

 ಮಂಗಳೂರು: ಮೊದಲ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಮೃತಪಟ್ಟ ಕಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

24 ವರ್ಷದ ಲೈಲಾ ಆಫಿಯಾ ಮೃತಪಟ್ಟವರು. ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆಯ ಜಮಾತ್ ಅಧ್ಯಕ್ಷ ಕೆ.ಹೆಚ್.ಕೆ. ಅಬ್ದುಲ್ ಕರೀಂ ಹಾಜಿ ಅವರ ಪುತ್ರಿ ಲೈಲಾ ಅವರ ಮದುವೆ ಭಾನುವಾರ ನಡೆದಿದ್ದು, ಅಡ್ಯಾರ್ ಗಾರ್ಡನ್ ನಲ್ಲಿ ಔತಣ ಕೂಟ ಕೂಡ ಏರ್ಪಡಿಸಲಾಗಿತ್ತು.

ಬಂಧು -ಬಾಂಧವರು ಮದುವೆ, ಔತಣಕೂಟದಲ್ಲಿ ಭಾಗಿಯಾಗಿ ಸಂಭ್ರಮದಲ್ಲಿದ್ದರು. ವಧು-ವರರು ಕೂಡ ಸಂಭ್ರಮದಲ್ಲಿದ್ದರು. ಆದರೆ, ಮದುವೆಯಾದ ಮೊದಲ ರಾತ್ರಿಯೇ ಮದುಮಗಳಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮದುವೆ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಏಕಾಏಕಿ ಮಗಳ ಸಾವಿನಿಂದ ಕುಟುಂಬ ದುಃಖದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...