alex Certify BIG BREAKING NEWS: ಕೆಲವೇ ಕ್ಷಣದಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ, ಇಂದು ರಾತ್ರಿಯಿಂದಲೇ ದೇಶಾದ್ಯಂತ ಲಾಕ್ಡೌನ್ ಜಾರಿ ಘೋಷಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಕೆಲವೇ ಕ್ಷಣದಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ, ಇಂದು ರಾತ್ರಿಯಿಂದಲೇ ದೇಶಾದ್ಯಂತ ಲಾಕ್ಡೌನ್ ಜಾರಿ ಘೋಷಣೆ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8.45 ಕ್ಕೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇವತ್ತು ಲಸಿಕೆ ಸಂಸ್ಥೆಗಳ ಜೊತೆಗೆ ಮೋದಿ ಚರ್ಚೆ ನಡೆಸಿದ್ದರು. ಇಡೀ ದೇಶದಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇನ್ನು ಕೆಲವೇ ಕ್ಷಣಗಳಲ್ಲಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಅವರ ಭಾಷಣದ ಕುರಿತು ಕುತೂಹಲ ಮೂಡಿದೆ. ದೇಶದಲ್ಲಿ ಪ್ರಸ್ತುತ ಕೊರೋನಾ ಪರಿಸ್ಥಿತಿ ಕೈಮೀರಿರುವುದರಿಂದ ಮತ್ತೊಮ್ಮೆ ಲಾಕ್ಡೌನ್ ಜಾರಿಯಂತಹ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಲಾಕ್ ಡೌನ್ ಜಾರಿ ಮಾಡದೇ ಟಫ್ ರೂಲ್ಸ್ ಜಾರಿ, ನಿಯಮ ಕಟ್ಟುನಿಟ್ಟಿನ ಪಾಲನೆ ಬಗ್ಗೆ ಜನರಿಗೆ ಸೂಚನೆ ನೀಡಲಾಗುವುದು ಎನ್ನಲಾಗಿದೆ. ಈ ಹಿಂದೆ ಮೋದಿ ರಾತ್ರಿ ವೇಳೆಯಲ್ಲೇ ನೋಟ್ ಬ್ಯಾನ್, ಲಾಕ್ ಡೌನ್ ಸೇರಿದಂತೆ ಮಹತ್ವದ ವಿಚಾರಗಳನ್ನು ಘೋಷಣೆ ಮಾಡಿದ್ದರು. ಇಂದು ಕೂಡ ಮಹತ್ವದ ಘೋಷಣೆ ಮಾಡಬಹುದೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...