alex Certify BREAKING : ಬಳ್ಳಾರಿಯಲ್ಲಿ ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ : ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬಳ್ಳಾರಿಯಲ್ಲಿ ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ : ಗಂಭೀರ ಗಾಯ

ಬಳ್ಳಾರಿ : ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬಳ್ಳಾರಿಯ ತೋರಣಗಲ್ಲಿನಲ್ಲಿ ನಡೆದಿದೆ.

ಇಲ್ಲಿಯ ರೈಲು ನಿಲ್ದಾಣ ಪ್ರದೇಶದ 11 ನೇ ವಾರ್ಡ್ ಘೋರ್ಪಡೆ ನಗರದ ಹೆಚ್ ಎಲ್ ಸಿ ಕಾಲುವೆಯ ಬಳಿ ಪುರಸಭೆ ಸದಸ್ಯ ನಾಗರಾಜ್ ನಾಯ್ಕ್ (32) ಮೇಲೆ ಶಿವಕುಮಾರ್ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ನಾಗರಾಜ್ ಅವರ ತಲೆ ಹಾಗು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ನಂತರ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ. ವಾರ್ಡ್ ನಲ್ಲಿರುವ ಚರಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಪರಸ್ಪರ ಗಲಾಟೆ ನಡೆದಿದೆ . ಮಾತಿಗೆ ಮಾತು ಬೆಳೆದು ಶಿವಕುಮಾರ್ ಮಚ್ಚು ತೆಗೆದುಕೊಂಡು ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...