alex Certify BREAKING: ಗಣಿ ಗುತ್ತಿಗೆ ಪ್ರಕರಣ; ಸಂಕಷ್ಟದಲ್ಲಿ ಜಾರ್ಖಂಡ್‌ ಸಿಎಂ; ವಿಧಾನಸಭಾ ಸದಸ್ಯತ್ವದಿಂದಲೇ ಅನರ್ಹಗೊಳ್ಳುವ ಭೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಗಣಿ ಗುತ್ತಿಗೆ ಪ್ರಕರಣ; ಸಂಕಷ್ಟದಲ್ಲಿ ಜಾರ್ಖಂಡ್‌ ಸಿಎಂ; ವಿಧಾನಸಭಾ ಸದಸ್ಯತ್ವದಿಂದಲೇ ಅನರ್ಹಗೊಳ್ಳುವ ಭೀತಿ

ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಧಾನಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಕಳಿಸುವ ವರದಿಗೆ ಸಂಬಂಧಪಟ್ಟಂತೆ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರು ಅಭಿಪ್ರಾಯವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.

ಬಿಜೆಪಿ, ಹೇಮಂತ್‌ ಸೊರೇನ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿತ್ತು. ಗಣಿಗಾರಿಕೆ ಗುತ್ತಿಗೆಯನ್ನು ಸ್ವತಃ ಸಿಎಂ ವಿಸ್ತರಿಸಿದ್ದಾರೆಂದು ಆರೋಪಿಸಿತ್ತು. ಈ ಸಂಬಂಧ ಚುನಾವಣಾ ಸಮಿತಿ ತಯಾರಿಸಿರುವ ವರದಿಯನ್ನು ಈಗಾಗ್ಲೇ ಮುಚ್ಚಿದ ಲಕೋಟೆಯಲ್ಲಿ ಜಾರ್ಖಂಡ್ ರಾಜಭವನಕ್ಕೆ ಕಳುಹಿಸಲಾಗಿದೆ.

ಹೇಮಂತ್‌ ಸೊರೇನ್‌ ಉಲ್ಲಂಘಿಸಿದ್ದಾರೆ ಎನ್ನಲಾದ ಚುನಾವಣಾ ಕಾನೂನಿನ ನಿಬಂಧನೆಗಳು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ತಂಡ ಚುನಾವಣಾ ಸಮಿತಿಯ ಎದುರು ಪ್ರತಿಪಾದಿಸಿದೆ. ಆಗಸ್ಟ್ 12 ರಂದು ಸೋರೆನ್ ಅವರ ಕಾನೂನು ತಂಡ ಚುನಾವಣಾ ಆಯೋಗದ ಮುಂದೆ ತನ್ನ ವಾದವನ್ನು ಮುಕ್ತಾಯಗೊಳಿಸಿತು. ಆಗಸ್ಟ್ 18 ರಂದು ಉಭಯ ಬಣಗಳು ತಮ್ಮ ಲಿಖಿತ ಸಲ್ಲಿಕೆಗಳನ್ನು ಚುನಾವಣಾ ಸಮಿತಿಗೆ ನೀಡಿದ್ದವು.

ಸಂವಿಧಾನದ 192ನೇ ವಿಧಿಯ ಅಡಿಯಲ್ಲಿ, ಒಂದು ರಾಜ್ಯದ ಶಾಸಕಾಂಗದ  ಸದಸ್ಯರು ಯಾವುದೇ ಅನರ್ಹತೆಗೆ ಒಳಪಟ್ಟಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದರೆ ಅಂತಿಮ ನಿರ್ಧಾರವನ್ನು ರಾಜ್ಯಪಾಲರಿಗೆ ಬಿಡಲಾಗುತ್ತದೆ. “ಅಂತಹ ಯಾವುದೇ ಪ್ರಶ್ನೆಗೆ ಯಾವುದೇ ನಿರ್ಧಾರ ಪ್ರಕಟಿಸುವ ಮೊದಲು ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯುತ್ತಾರೆ. ಅದರಂತೆ ಕಾರ್ಯನಿರ್ವಹಿಸುತ್ತಾರೆ. ಈ ಪ್ರಕರಣ ಸರ್ಕಾರಿ ಒಪ್ಪಂದಗಳ ಅನರ್ಹತೆಗೆ ಸಂಬಂಧಿಸಿದ 1951ರ ಸೆಕ್ಷನ್ 9 ಎ ಅಡಿಯಲ್ಲಿ ಬರುವುದಿಲ್ಲ ಎಂದು ಸೊರೇನ್‌ ಪರ ವಕೀಲರು ವಾದ ವಿವಾದದ ಸಂದರ್ಭದಲ್ಲಿ ಹೇಳಿದ್ದರು. ಆಗಸ್ಟ್‌ 12ರಂದು ಚುನಾವಣಾ ಆಯೋಗದಲ್ಲಿ 2 ಗಂಟೆಗಳ ಕಾಲ ವಾದ ಪ್ರತಿವಾದ ನಡೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...