alex Certify ಪ್ರೀತಿಸಿದ ಹುಡುಗಿಯ ಪಾದಕ್ಕೆ ಈತ ಫಿದಾ..! ನೀಡಿದ್ದಾನೆ ಲಕ್ಷಾಂತರ ರೂ. ಬೆಲೆ ಶೂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ ಹುಡುಗಿಯ ಪಾದಕ್ಕೆ ಈತ ಫಿದಾ..! ನೀಡಿದ್ದಾನೆ ಲಕ್ಷಾಂತರ ರೂ. ಬೆಲೆ ಶೂ

ಪ್ರೀತಿ ಒಂದು ಅಧ್ಬುತ ವಿಷ್ಯ. ಪ್ರೀತಿಸಿದ ವ್ಯಕ್ತಿಯ ಎಲ್ಲ ಸ್ವಭಾವ ಇಷ್ಟವಾಗಬೇಕೆಂದೇನಿಲ್ಲ. ಹಾಗೆ ಅವರ ಒಂದು ವ್ಯಕ್ತಿತ್ವ ಅಥವಾ ಯಾವುದೋ ಅಂಗ ಗಮನ ಸೆಳೆಯುತ್ತದೆ. ಕೆಲವರು ಪ್ರೀತಿಸಿದವರ ಕಣ್ಣನ್ನು ಇಷ್ಟಪಟ್ಟರೆ ಮತ್ತೆ ಕೆಲವರು ಕೂದಲನ್ನು ಇಷ್ಟಪಡ್ತಾರೆ. ಇನ್ನು ಕೆಲವರು ಕೈ ಬೆರಳುಗಳನ್ನು ಇಷ್ಟಪಡ್ತಾರೆ. ಕಾಲಿನ ಸೌಂದರ್ಯಕ್ಕೆ ಮರುಳಾಗುವವರಿದ್ದಾರೆ.

ಇಲ್ಲೊಬ್ಬ ವ್ಯಕ್ತಿಯೂ ತನ್ನ ಸಂಗಾತಿ ಕಾಲನ್ನು ಎಷ್ಟು ಪ್ರೀತಿಸುತ್ತಾನೆಂದ್ರೆ ಆಕೆ ಪಾದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಂತೆ.

ಅಮೆರಿಕದ ಅರಿಜೋನಾದ ಅನ್ನಾಬೆಲ್ ಫೆಮೆಂಕೊ,ತನ್ನ ಗೆಳೆಯನ ಬಗ್ಗೆ ಹೇಳಿದ್ದಾಳೆ. ಆಕೆ ಪಾದಗಳು, ಗೆಳೆಯನಿಗೆ ಅತಿ ಇಷ್ಟವಂತೆ. ಪಾದವನ್ನು ತುಂಬಾ ಪ್ರೀತಿಸುವ ಪ್ರೇಮಿ, ಪಾದ ನೋಡಿದ್ರೆ ರೋಮ್ಯಾಂಟಿಕ್ ಆಗ್ತಾನಂತೆ. ಪ್ರೀತಿಯ ಪಾದಕ್ಕೆ ಸಾಕಷ್ಟು ದುಬಾರಿ ಉಡುಗೊರೆ ನೀಡಿದ್ದಾನಂತೆ.

ಟಿಕ್ ಟಾಕ್ ನಲ್ಲಿ ಅನ್ನಾಬೆಲ್ ಫೆಮೆಂಕೊ ವಿಡಿಯೋ ಹಂಚಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ನೀಡಿರುವ ಪಾದರಕ್ಷೆಗಳನ್ನು ತೋರಿಸಿದ್ದಾಳೆ. ಆಕೆ ಪಾದಕ್ಕಾಗಿ ಬಾಯ್ ಫ್ರೆಂಡ್ ದುಬಾರಿ ಪಾದರಕ್ಷೆಗಳನ್ನು ನೀಡಿದ್ದಾನೆ.

ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆಕೆಗೆ ಸುಂದರ ಪಾದರಕ್ಷೆಗಳು ಸಿಕ್ಕಿವೆಯಂತೆ. ಪ್ರೇಮಿ ಪಾದಗಳನ್ನು ಪ್ರೀತಿ ಮಾಡುವುದ್ರಿಂದ ಎಷ್ಟೆಲ್ಲ ಪ್ರಯೋಜನವಿದೆ ಎಂದಿದ್ದಾಳೆ ಆಕೆ. ಇದ್ರಿಂದ ನನಗೆ ಲಕ್ಷಾಂತರ ರೂಪಾಯಿ ಬೆಲೆಯ ಪಾದರಕ್ಷೆಗಳು ಸಿಗ್ತಿವೆ ಎಂದು ಖುಷಿ ವ್ಯಕ್ತಪಡಿಸಿದ್ದಾಳೆ. ಈವರೆಗೆ ಆಕೆ ವಿಡಿಯೋವನ್ನು 2 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...