alex Certify ಬಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಅಪರಿಚಿತನ ಸಮಯಪ್ರಜ್ಞೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಅಪರಿಚಿತನ ಸಮಯಪ್ರಜ್ಞೆ

ರೆಸ್ಟೋರೆಂಟ್ ಒಳಗೆ ತಿಂದ ತಿಂಡಿಯೊಂದು ನೆತ್ತೆಗೇರಿ ಕುಸಿದು ಬೀಳುತ್ತಿದ್ದ ಹುಡುಗನೊಬ್ಬನ ಜೀವ ಉಳಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ರೆಸ್ಟೋರೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾ ಈ ದೃಶ್ಯ ಸೆರೆ ಹಿಡಿದಿದೆ.

ಜೋಸೆಫ್ ರೀನ್‌ಹಾರ್ಟ್ ಹೆಸರಿನ ವ್ಯಕ್ತಿ ಆ ಹುಡುಗನ ಜೀವವನ್ನು ಉಳಿಸಿದ್ದಾರೆ. ಚಿಕನ್ ಸ್ಯಾಂಡ್‌ವಿಚ್‌‌ ಒಂದು ಗಂಟಲಿಗೆ ಸಿಕ್ಕಿಕೊಂಡು ಕುಸಿದು ಬೀಳುತ್ತಿದ್ದ ಹುಡುಗನನ್ನು ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ. ಸ್ಥಳದಲ್ಲಿಯೇ ಇದ್ದ ಜೋಸೆಫ್ ಕೂಡಲೇ ಸಮಯಪ್ರಜ್ಞೆ ಮೆರೆದು ಬಾಲಕನ ಗಂಟಲಿಗೆ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್ ತುಂಡನ್ನು ಕೆಳಗೆ ಬೀಳಿಸಿ, ಆತನನ್ನು ರಕ್ಷಿಸಿದ್ದಾರೆ.

555 ರೇಜರ್ ನಷ್ಟು ಚೂಪಾಗಿರುತ್ತದೆ ಪರಭಕ್ಷಕ ಮೀನುಗಳ ಹಲ್ಲು: ಹೊಸ ಅಧ್ಯಯನದಿಂದ ಬಹಿರಂಗ

ಹೆಮ್ಲಿಚ್‌ ಚಮತ್ಕಾರದ ಮೂಲಕ ಈತ ಬಾಲಕನ ಬಾಯಿಗೆ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್‌ ಅನ್ನು ಬೀಳಿಸಿದ್ದಾರೆ. ಬಾಲಕನ ಬಾಯಿಯಿಂದ ಸಿಕ್ಕಿಕೊಂಡಿದ್ದ ಸ್ಯಾಂಡ್‌ವಿಚ್‌ ಅನ್ನು ಬೀಳಿಸಿದ್ದಾರೆ ಹಳದಿ ಶರ್ಟ್‌ಧಾರಿ ಹೀರೋ.

ಈ ವಿಡಿಯೋವನ್ನು 2500 ಬಾರಿ ವೀಕ್ಷಿಸಲಾಗಿದ್ದು, ಬಾಲಕನನ್ನು ರಕ್ಷಿಸಿದಾತನನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...