alex Certify ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಥಳಿತ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ಥಳಿತ: ವಿಡಿಯೋ ವೈರಲ್​

ಮಗುವನ್ನು ಎತ್ತಿಕೊಂಡು ಹೋಗ್ತಿದ್ದ ಮಹಿಳೆಗೆ ಥಳಿಸಿದಂತಹ ಮನಕಲುಕುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಥಳಿಸುತ್ತಿರೋದನ್ನು ಕಾಣಬಹುದಾಗಿದೆ.

ಮುಂಬೈನ ವಸಾಯಿ ಎಂಬ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯೊಂದು ಈ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

ವಸಾಯಿ ರಸ್ತೆಯ ಸ್ಟೇಷನ್​ ಪ್ರದೇಶದ ಸುತ್ತಲೂ ಅಳವಡಿಸಲಾದ ಕ್ಯಾಮರಾಗಳಲ್ಲಿ ದಾಖಲಾಗಿರುವ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕೂದಲನ್ನು ಹಿಡಿದೆಳೆದಿದ್ದು ಮಾತ್ರವಲ್ಲದೇ ಆಕೆಗೆ ಕ್ರೂರವಾಗಿ ಥಳಿಸಿದ್ದಾನೆ. ಈ ದೃಶ್ಯವನ್ನು ನೋಡುತ್ತಿದ್ದ ಮಗು ಚೀರುತ್ತಿರೋದನ್ನು ಕಾಣಬಹುದಾಗಿದೆ.

ಇದಾದ ಬಳಿಕ ಪುರುಷರ ಗುಂಪೊಂದು ಮಹಿಳೆಯನ್ನು ಥಳಿಸಿದ್ದಕ್ಕೆ ವ್ಯಕ್ತಿಗೆ ಅಡ್ಡಿಪಡಿಸಿದೆ ಹಾಗೂ ಆತನಿಗೆ ಥಳಿಸಿದ್ದಾರೆ. ಈ ದೃಶ್ಯ ಕೂಡ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ವ್ಯಕ್ತಿಯು ಸಣ್ಣ ವಿಷಯಕ್ಕೆ ಮಹಿಳೆಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ ಹಾಗೂ ಇದು ಬಳಿಕ ದೈಹಿಕ ಹಿಂಸೆಗೆ ತಿರುಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...