alex Certify 4ನೇ ಕ್ಲಾಸ್​ ವಿದ್ಯಾರ್ಥಿ ಬರೆದ ಪುಟ್ಟ ಕವನ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4ನೇ ಕ್ಲಾಸ್​ ವಿದ್ಯಾರ್ಥಿ ಬರೆದ ಪುಟ್ಟ ಕವನ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಬಹುತೇಕ ಎಲ್ಲ ಮಕ್ಕಳಲ್ಲಿಯೂ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರತರಲು ಹಿರಿಯರು ಪ್ರಯತ್ನಿಸಬೇಕಷ್ಟೇ. ನಾಲ್ಕನೇ ಕ್ಲಾಸ್​ನಲ್ಲಿ ಓದುತ್ತಿರುವ ಬಾಲಕನೊಬ್ಬ ಬರೆದಿರುವ ಎರಡು ಚಿಕ್ಕ ಪದ್ಯ ಈಗ ನೆಟ್ಟಿಗರ ಮನ ಗೆದ್ದಿದೆ. ಎರಡು ವರ್ಷಗಳ ಹಿಂದೆ ಕರೊನಾ ಸಮಯದಲ್ಲಿ ಆನ್​ಲೈನ್​ ತರಗತಿ ಮಾಡುತ್ತಿದ್ದ ವೇಳೆ ಬಾಲಕನೊಬ್ಬ ಬರೆದಿರುವ ಈ ಕವನಗಳನ್ನು ಆತನ ತಂದೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್​ ಆಗುತ್ತಿದೆ.

ಒಂದು ಕವನದಲ್ಲಿ ಬಾಲಕ, “ನನಗೆ ಕವಿತೆಯ ಕಲ್ಪನೆ ಇತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಈಗ ಅದು ನನ್ನ ಮನಸ್ಸಿನಿಂದ ಹೊರಬಂದಿದೆ ಮತ್ತು ಮನೆಯ ಸುತ್ತಲೂ ಅಲೆದಾಡುತ್ತಿದೆ’ ಎಂದು ಬರೆದಿದ್ದಾನೆ. ಇನ್ನೊಂದು ಕವನವನ್ನು ಬಾಲಕ ತನ್ನ ತಾಯಿಗೆ ಅರ್ಪಿಸಿದ್ದಾನೆ. ಅದರಲ್ಲಿ ಆತ, “ನೀವು ಮುಳ್ಳುಗಳಿರುವ ಕಾಂಡದ ಮೇಲೆ ಗುಲಾಬಿಯಂತೆ ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ” ಎಂದು ಬರೆದಿದ್ದಾನೆ.

ಈ ಎರಡೂ ಕವನಗಳ ಪೈಕಿ ಹೆಚ್ಚಿನವರು ತಾಯಂದಿರ ದಿನದಂದು ಬಾಲಕ ತಾಯಿಯ ಕುರಿತಾಗಿ ಬರೆದಿರುವ ಕವನಕ್ಕೆ ಹೆಚ್ಚು ಮಾರು ಹೋಗಿದ್ದಾರೆ. ಸರಳವಾಗಿದ್ದರೂ, ಚಿಕ್ಕ ತುಣುಕುಗಳ ಹಿಂದಿನ ಅರ್ಥವು ಅಮೋಘವಾದದ್ದು ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ದಿನದಲ್ಲಿ ಈ ಟ್ವೀಟ್​ಗೆ 1.59 ಲಕ್ಷಕ್ಕೂ ಹೆಚ್ಚು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

https://twitter.com/MLGinFLA/status/1585300855145697280?ref_src=twsrc%5Etfw%7Ctwcamp%5Etweetembed%7Ctwterm%5E1585300855145697280%7Ctwgr%5E2fc8ba01dfddf7c336df374f042ad10422f05cc3%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fborn-writer-fourth-graders-simple-lines-leave-internet-mighty-impressed-6254257.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...