alex Certify ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್​ಫೋನ್​ ಬಿಟ್ಟು ಪಾನಕ ಮಾರುತ್ತಿರುವ ಬೆಂಗಳೂರಿನ ಮಕ್ಕಳು: ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪರೀಕ್ಷೆ ಮುಗಿದಿದೆ. ಮಕ್ಕಳಿಗೆ ಈಗ ರಜೆ. ಮನೆಯಲ್ಲಿ ಆಟೋಟ ಎಲ್ಲಾ ಮಾಡಿಕೊಂಡಿದ್ದರೂ, ಕೆಲವು ಮಕ್ಕಳಿಗೆ ದಿನ ಕಳೆಯುವುದು ಕಷ್ಟವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಮೊಬೈಲ್ ಫೋನ್‌ಗಳು, ವೀಡಿಯೋ ಗೇಮ್‌ಗಳು ಮತ್ತು ಇತರ ಗ್ಯಾಜೆಟ್‌ಗಳು ಇರುವಾಗ ಸಮಯ ಎಷ್ಟಿದ್ದರೂ ಸಾಲುವುದೇ ಇಲ್ಲ ಎನ್ನುವ ಆರೋಪವಿದೆ.

ಆದರೆ ಎಲ್ಲಾ ಮಕ್ಕಳನ್ನೂ ಒಂದೇ ರೀತಿ ಅಳೆಯಲು ಸಾಧ್ಯವಿಲ್ಲ. ಅದರಲ್ಲಿಯೂ ನಗರ ಪ್ರದೇಶದ ಮಕ್ಕಳು ಎಂದರೆ ಅವರಿಗೆ ಬೇರೆ ಚಟುವಟಿಕೆಗಳೇ ಗೊತ್ತಿಲ್ಲ ಎನ್ನುವುದುಂಟು. ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರಿನ ಮಕ್ಕಳು ಬೀದಿಗಳಲ್ಲಿ ಕೈಯಿಂದ ಮಾಡಿದ ನಿಂಬೆ ಪಾನಕವನ್ನು ಮಾರಾಟ ಮಾಡುವ ಮೂಲಕ ತಮ್ಮ ಬೇಸರವನ್ನು ಅವಕಾಶವನ್ನಾಗಿ ಮಾಡಲು ನಿರ್ಧರಿಸಿದ್ದಾರೆ.

ಈ ಮಕ್ಕಳ ಕಾರ್ಯಕ್ಕೆ ಬಹಳ ಶ್ಲಾಘನೆ ವ್ಯಕ್ತವಾಗುತ್ತಿದೆ. ಮಕ್ಕಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಈ ಮಕ್ಕಳನ್ನು ಉದಾಹರಣೆಯಾಗಿ ಇರಿಸಿಕೊಂಡು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮೊಬೈಲ್​ನ ಈ ಕಾಲದಲ್ಲಿಯೂ ಇಷ್ಟೊಂದು ಚಟುವಟಿಕೆಯಿಂದ ಮಕ್ಕಳು ಇರುವುದನ್ನು ಅದರಲ್ಲಿಯೂ ಬೆಂಗಳೂರಿನ ಮಕ್ಕಳು ಕೆಲಸ ಮಾಡುತ್ತಿರುವುದಕ್ಕೆ ಹಲವು ಪ್ರಶಂಸೆ ವ್ಯಕ್ತವಾಗಿದೆ.

ಆಯುಷಿ ಕುಚ್ರೂ ಎಂಬ ಟ್ವಿಟರ್ ಬಳಕೆದಾರರು ಇತ್ತೀಚೆಗೆ ಇಂದಿರಾನಗರದ ವಸತಿ ಗೇಟ್‌ನ ಹೊರಗೆ ಕುಳಿತಿರುವ ಮಕ್ಕಳ ಗುಂಪಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...