alex Certify ಕುತೂಹಲಕ್ಕೆ ಕಾರಣವಾಗಿದೆ ಸೋನು ಸೂದ್ – ಕೇಜ್ರಿವಾಲ್ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಸೋನು ಸೂದ್ – ಕೇಜ್ರಿವಾಲ್ ಭೇಟಿ

Sonu Sood | Bollywood actor Sonu Sood to meet CM Arvind Kejriwal in Delhi tomorrow | Delhi News

ಇತ್ತೀಚೆಗೆ ಮಹಾರಾಷ್ಟ್ರ ಕಾಂಗ್ರೆಸ್‍ನಿಂದ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧಪಡಿಸಲಾದ ಕಾರ್ಯತಂತ್ರದಲ್ಲಿ ಬಾಲಿವುಡ್ ನಟ, ಕೊರೊನಾ ಸಮಯದಲ್ಲಿ ಜನರಿಗೆ ನೆರವಾದ ಸೂಪರ್ ಹೀರೋ ‘ಸೋನು ಸೂದ್’ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಬಿಂಬಿಸುವಂತೆ ತೀರ್ಮಾನಿಸಲಾಗಿದೆ.

ಇದರ ಬೆನ್ನಿಗೇ ಸೋನು ಅವರು ದಿಲ್ಲಿಯಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇದು ದೇಶಾದ್ಯಂತ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ದೊಡ್ಡಮಟ್ಟದ ಕುತೂಹಲಕ್ಕೆ ಕಾರಣವಾಗಿದೆ.

ವೈದ್ಯರಿಗೆ ನಟ ಸೋನು ಸೂದ್ ಕೇಳಿದ ಪ್ರಶ್ನೆಗೆ ಭೇಷ್ ಎನ್ನಲೇಬೇಕು

ಕೊರೊನಾ ದಾಳಿ, ಲಾಕ್‍ಡೌನ್, ಆಮ್ಲಜನಕದ ಕೊರತೆ ಸಂದರ್ಭದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶಗಳಲ್ಲಿ ಅಗತ್ಯ ಇರುವವರಿಗೆ ಸೋನು ಮತ್ತು ಅವರ ತಂಡವು ಸೂಕ್ತ ನೆರವು ನೀಡಿ ಜನರ ಮನಗೆದ್ದಿದೆ. ತೆಲಂಗಾಣದ ಪ್ರಭಾವಿ ಸಚಿವ, ಸಿಎಂ ಕೆಸಿಆರ್ ಪುತ್ರರಾದ ಕೆ.ಟಿ. ರಾಮರಾವ್ ಕೂಡ ಸೋನು ಅವರ ಕಾರ್ಯ ಶ್ಲಾಘಿಸಿ, ನಿಜವಾದ ‘ಸೂಪರ್ ಹೀರೋ’ ಎಂದು ಬಿರುದು ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...