alex Certify ಸೆಕ್ಸ್ ಡಾಲ್ ಜೊತೆ ಮದುವೆಯಾದ ʼಬಾಡಿ ಬಿಲ್ಡರ್ʼನ ಮತ್ತೊಂದು ಆಸೆಯೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಡಾಲ್ ಜೊತೆ ಮದುವೆಯಾದ ʼಬಾಡಿ ಬಿಲ್ಡರ್ʼನ ಮತ್ತೊಂದು ಆಸೆಯೇನು ಗೊತ್ತಾ….?

ವಿಶ್ವದಲ್ಲಿ ಚಿತ್ರವಿಚಿತ್ರ ವ್ಯಕ್ತಿಗಳಿರ್ತಾರೆ. ಅವರ ಹವ್ಯಾಸ, ಜೀವನ ಶೈಲಿ ಬೇರೆ ಬೇರೆಯಾಗಿರುತ್ತದೆ. ಖಜಕಿಸ್ತಾನದ ಬಾಡಿ ಬಿಲ್ಡರ್ ಯುರಿ ಟೊಲೊಚ್ಕೊ ಸೆಕ್ಸ್ ಟಾಯ್ಸ್ ಜೊತೆ ಮದುವೆಯಾಗಿದ್ದಾನೆ. ಒಂದಲ್ಲ ಎರಡು ಸೆಕ್ಸ್ ಟಾಯ್ಸ್ ಜೊತೆ ಮದುವೆಯಾಗಿದ್ದಾನೆ.

ಯುರಿ, 2020ರಲ್ಲಿ ಮೊದಲ ಬಾರಿ ಸೆಕ್ಸ್ ಟಾಯ್ಸ್ ಜೊತೆ ಮದುವೆಯಾಗಿದ್ದ. ಈತನ ಮದುವೆಗೆ ನೂರಾರು ಮಂದಿ ಬಂದಿದ್ದರು. ಸೆಕ್ಸ್ ಡಾಲ್ ಮಾರ್ಗೊ ಜೊತೆ ಮದುವೆಯಾಗಿದ್ದ. ನಂತ್ರ ಲೂನಾ ಜೊತೆ ವಿವಾಹವಾಗಿದ್ದ. ಮಾರ್ಗೊ ಹಾಗೂ ಲೂನಾ ಜೊತೆ ಸಂಸಾರ ನಡೆಸಿದ್ದ ಯುರಿ ನಂತ್ರ ಮಾರ್ಗೊಳಿಂದ ಬೇರ್ಪಟ್ಟಿದ್ದ.

ಮನುಷ್ಯರ ಜೊತೆ ಸಂಬಂಧ ಬೆಳೆಸಲು ಸಿದ್ಧ ಎಂದಿರುವ ಯುರಿ ಇದಕ್ಕೆ ಷರತ್ತಿಟ್ಟಿದ್ದಾನೆ. ರೆಡಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುರಿ, ಸಂಬಂಧದ ಬಗ್ಗೆ ಮಾತನಾಡಿದ್ದಾನೆ. ಈ ಹಿಂದೆ ಮಹಿಳೆಯೊಬ್ಬಳ ಜೊತೆ ದೀರ್ಘ ಕಾಲದ ಸಂಬಂಧ ಹೊಂದಿದ್ದೆ. ಈಗ ಮತ್ತೆ ಸಂಬಂಧ ಬೆಳೆಸಲು ಸಿದ್ಧವಾಗಿದ್ದೇನೆಂದು ಯುರಿ ಹೇಳಿದ್ದಾನೆ.

ಮುಂದೆ ನನ್ನ ಬಾಳಿನಲ್ಲಿ ಬರುವ ವ್ಯಕ್ತಿ ಕೂಡ ಡಾಲ್ ಗಳನ್ನು ಇಷ್ಟಪಡಬೇಕು ಎಂದ ಯುರಿ, ಮುಂದಿನ ದಿನಗಳಲ್ಲಿ ಮೇಲ್ ಸೆಕ್ಸ್ ಡಾಲ್ ಜೊತೆ ಸಂಬಂಧ ಬೆಳೆಸುವ ಆಲೋಚನೆಯಲ್ಲಿದ್ದಾನೆ. ಮೇಲ್ ಸೆಕ್ಸ್ ಡಾಲ್ ಜೊತೆ ಮದುವೆಯಾಗಿ ಎರಡು ಡಾಲ್ ಜೊತೆ ಪಾರ್ಟಿ ಮಾಡುವ ಆಸೆ ಯುರಿಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...