alex Certify BMW X4 M40i ಬಿಡುಗಡೆ; 96.2 ಲಕ್ಷ ರೂ. ಬೆಲೆಯ ಕಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BMW X4 M40i ಬಿಡುಗಡೆ; 96.2 ಲಕ್ಷ ರೂ. ಬೆಲೆಯ ಕಾರ್

BMW X4 M40i Launched In India; Prices Start At Rs 96.20 Lakh

ಬಿಎಂ ಡಬ್ಯೂ-4 X4 M40i ಭಾರತದ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಿಎಂಡಬ್ಲ್ಯೂ ಇಂಡಿಯಾ ಭಾರತದಲ್ಲಿ ಈ ಹೊಸ ಕಾರನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ 96.2 ಲಕ್ಷ ರೂಪಾಯಿ. ( ಎಕ್ಸ್ ಶೋ ರೂಂ) ಸಿಬಿಯು ( ಕಂಪ್ಲೀಟ್ ಬಿಲ್ಟ್ ಯುನಿಟ್ ) ಮೂಲಕ ಇದನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಐಷಾರಾಮಿ ಎಸ್ ಯು ವಿ ಸೀಮಿತ ಸಂಖ್ಯೆಯಲ್ಲಿ ಸಿಗಲಿದ್ದು BMW ನಿರ್ದಿಷ್ಟ ಸಂಖ್ಯೆಯನ್ನು ನಿರ್ದಿಷ್ಟಪಡಿಸಿಲ್ಲ. ಆನ್‌ಲೈನ್ ಶಾಪ್‌ನಲ್ಲಿ ಪ್ರತ್ಯೇಕವಾಗಿ ಬುಕ್ ಮಾಡಬಹುದು. ಇದಕ್ಕೂ ಮುಂಚಿನ ವಾಹನಕ್ಕೆ ಹೋಲಿಸಿದರೆ, ಹೊಸ X4 ಉತ್ತಮ ಬಾಹ್ಯ ನೋಟ ಮತ್ತು ನವೀಕರಿಸಿದ ಇಂಟೀಯರ್ ನೊಂದಿಗೆ ಆಕರ್ಷಕವಾಗಿದೆ. ಕೇವಲ 4.9 ಸೆಕೆಂಡುಗಳಲ್ಲಿ ಈ ಎಸ್ ಯು ವಿ ಗಂಟೆಗೆ 250 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಕ್ಯಾಬಿನ್ ನ ಒಳಭಾಗವು 12.3-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಟ್ವಿನ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿವೆ.

3-ಜೋನ್ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಒರಗಿರುವ ಹಿಂಬದಿಯ ಆಸನಗಳು, ವಿಹಂಗಮ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ, ಪಾರ್ಕಿಂಗ್ ನೆರವು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಇತರ ಗಮನಾರ್ಹ ವೈಶಿಷ್ಟ್ಯಗಳು ಇದರಲ್ಲಿವೆ. ಸುರಕ್ಷತಾ ವೈಶಿಷ್ಯ್ಪಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇನ್ನು ವಿನ್ಯಾಸದ ವಿಷಯಲ್ಲಿ ಹೊಸ X4 M40i ಕೂಪ್ ಎಸ್‌ಯುವಿ ಮುಂಭಾಗದಲ್ಲಿ ನಯವಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಕ್ರೋಮ್ ಫ್ರೇಮ್‌ನೊಂದಿಗೆ ದೊಡ್ಡ ಬಿಎಂಡಬ್ಲ್ಯೂ ಎಂ ಗ್ರಿಲ್ ಅನ್ನು ಪಡೆಯುತ್ತದೆ. ಇತರ ಬಾಹ್ಯ ಮುಖ್ಯಾಂಶಗಳಲ್ಲಿ ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು, ಸ್ಲೀಕ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಸ್ಕಿಡ್ ಪ್ಲೇಟ್‌ಗಳು, ಕೆಂಪು ಕ್ಯಾಲಿಪರ್‌ಗಳೊಂದಿಗೆ ಹೊಸ 20-ಇಂಚಿನ ಆಲಾಯ್ ವ್ಹೀಲ್‌ಗಳೂ ಸೇರಿವೆ.

ಈ ಹೊಸ ಕಾರು 3.0-ಲೀಟರ್ ಟರ್ಬೊ ಇನ್‌ಲೈನ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 355 ಬಿಹೆಚ್‌ಪಿ ಶಕ್ತಿ ಮತ್ತು 500 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಎಂಜಿನ್ 48-ವೋಲ್ಟ್ ಸೌಮ್ಯ ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆಯುತ್ತದೆ. ಅದು ಕಡಿಮೆ ಇಂಧನ ಬಳಕೆಯೊಂದಿಗೆ ಉತ್ತಮ ಚಾಲನಾ ಕಾರ್ಯಕ್ಷಮತೆಯನ್ನು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...