alex Certify ಭಾರತದಲ್ಲಿಯೂ ಲಾಂಚ್ ಆಯ್ತು BMW ಎಲೆಕ್ಟ್ರಿಕ್​ ಕಾರು : ಇಲ್ಲಿದೆ ಇದರ ಬೆಲೆ, ವಿಶೇಷತೆ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿಯೂ ಲಾಂಚ್ ಆಯ್ತು BMW ಎಲೆಕ್ಟ್ರಿಕ್​ ಕಾರು : ಇಲ್ಲಿದೆ ಇದರ ಬೆಲೆ, ವಿಶೇಷತೆ ಕುರಿತ ಮಾಹಿತಿ

ಬಿಎಂಡಬ್ಲು ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಂಪೂರ್ಣ ಎಲೆಕ್ಟ್ರಿಕ್​ ಮಾಡೆಲ್​ ಬಿಎಂಡಬ್ಲು ಐಎಕ್ಸ್​1ನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಕಾರಿನ ದರ 66,90,000 ರೂಪಾಯಿ ಇರಲಿದೆ ಎಂದು ಕಂಪನಿ ತಿಳಿಸಿದೆ. iX1 ಮಾದರಿಯು 66.4kWh ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ.

ಬಿಎಂಡಬ್ಲು ಐಎಕ್ಸ್​1 ಕಾಕ್​ಪಿಟ್​​ ಸ್ಪರ್ಶ ಹಾಗೂ ಧ್ವನಿ ನಿಯಂತ್ರಣದ ಬೆಂಬಲದೊಂದಿಗೆ ಕರ್ವ್​ ಡಿಸ್​ಪ್ಲೇ ಹೊಂದಿದೆ. ಬಿಎಂಡಬ್ಲು ಹೊಸ ಕಾರಿನಲ್ಲಿ ನೀವು ಒಂದು ಬಾರಿ ಚಾರ್ಜ್​ ಮಾಡಿದರೆ ಅಂದು 440 ಕಿ. ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.

ಸಾರ್ವಜನಿಕ ಚಾರ್ಜಿಂಗ್​ ಸ್ಟೇಷನ್​ಗಳಲ್ಲಿ ವೇಗವಾಗಿ ಚಾರ್ಜ್ ಮಾಡಬಹುದಾಗಿದೆ.

BMW iX1 Apple CarPlay ಮತ್ತು Android Auto ಸಪೋರ್ಟ್ ಹೊಂದಿದೆ. ಪನೋರಮಿಕ್ ಗ್ಲಾಸ್​, ಸನ್​ರೂಫ್​ ಹಾಗೂ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಈ ಕಾರು ಹೊಂದಿದೆ. ಈ ಕಾರು 230 kW (hp) ಪವರ್ ಮತ್ತು 494 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನೀವು 120 ಕಿ.ಮೀ ದೂರ ಪ್ರಯಾಣಿಸಬೇಕು ಎಂದುಕೊಂಡಿದ್ದಲ್ಲಿ ಚಾರ್ಜಿಂಗ್​ ಸ್ಟೇಷನ್​ನಲ್ಲಿ ಕೇವಲ 10 ನಿಮಿಷ ಚಾರ್ಜ್ ಮಾಡಿದರೂ ಸಾಕು. ಈ ಕಾರಿಗೆ ಬುಕ್ಕಿಂಗ್​ ಈಗಾಗಲೇ ಆರಂಭಗೊಂಡಿದೆ. ಭಾರತದಲ್ಲಿ ಎಕ್ಸ್​ ಶೋ ರೂಂ ಬೆಲೆ 66.90 ಲಕ್ಷ ರೂಪಾಯಿ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...