alex Certify BREAKING: ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಇಳಿಕೆ; ವೋಲ್ವೊ ಪ್ರಯಾಣ ದರ ಶೇ. 34 ರಷ್ಟು ಕಡಿತ ಮಾಡಿದ BMTC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಇಳಿಕೆ; ವೋಲ್ವೊ ಪ್ರಯಾಣ ದರ ಶೇ. 34 ರಷ್ಟು ಕಡಿತ ಮಾಡಿದ BMTC

ಬೆಂಗಳೂರು: ವೋಲ್ವೊ ಬಸ್ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿ ಸುದ್ದಿ ನೀಡಲಾಗಿದೆ. ಇನ್ನು ಮುಂದೆ ವೋಲ್ವೋ ಬಸ್ ಟಿಕೆಟ್ ದರವನ್ನು ಶೇಕಡ 34 ರಷ್ಟು ಕಡಿತಗೊಳಿಸಲಾಗುವುದು.

ವಜ್ರ ಸಾರಿಗೆಗಳ ಪ್ರಯಾಣ ದರದಲ್ಲಿ 34ರಷ್ಟು ಕಡಿತ ಮಾಡಲಾಗಿದೆ.  ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಡಿಸೆಂಬರ್ 17 ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.

120 ರೂಪಾಯಿ ಇದ್ದ ದಿನದ ಪಾಸ್ ಇನ್ಮುಂದೆ 100 ರೂಪಾಯಿಗೆ ಲಭ್ಯವಾಗಲಿದೆ. 2000 ರೂ. ಇದ್ದ ಮಾಸಿಕ ಪಾಸ್ ದರ 1500 ರೂ ಆಗಲಿದೆ. 50 ಕಿಲೋಮೀಟರ್ ಗೆ 90 ರೂ. ಇದ್ದ ಟಿಕೆಟ್ ದರ 50 ರೂ.ಗೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...