alex Certify ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..?

ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಣೆ ಈಗ ಮಾಮೂಲಿಯಾಗಿದೆ. ಕೆಲಸ ಮಾಡುವ ಜನರು ದಿನಕ್ಕೆ 8 ಗಂಟೆಗಳ ಕಾಲ ಕಂಪ್ಯೂಟರ್ ನೋಡಿದ್ರೆ, ಇನ್ನು ಕೆಲವರು 12 ಗಂಟೆಗೂ ಹೆಚ್ಚು ಕಾಲ ಮೊಬೈಲ್ ನಲ್ಲಿ ಆಟವಾಡ್ತಾ ಕಾಲ ಕಳೆಯುತ್ತಾರೆ. ಕಂಪ್ಯೂಟರ್ ಹಾಗೂ ಮೊಬೈಲ್ ಪರದೆಯಿಂದ ಹೊರಬರುವ ನೀಲಿ ಬೆಳಕು ಹೆಚ್ಚು ಅಪಾಯಕಾರಿ. ತಜ್ಞರ ಪ್ರಕಾರ, ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಚರ್ಮದ ಮೇಲೂ ಪರಿಣಾಮ ಬೀರುತ್ತದೆ.

ನೀಲಿ ಬೆಳಕು ಹೆಚ್ಚು ಹಾನಿಕಾರಕವಾಗಿದೆ. ನೀಲಿ ಬೆಳಕಿಗೆ ನಿರಂತರವಾಗಿ ನಮ್ಮ ದೇಹವನ್ನು ಒಡ್ಡಿಕೊಳ್ಳುವುದರಿಂದ, ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಇದು ಮುಖದ ಮೇಲೆ ಊತ, ಸುಕ್ಕುಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಗೆ ಕಾರಣವಾಗಬಹುದು. ನಿದ್ರಾಹೀನತೆ, ದೃಷ್ಟಿಹೀನತೆ, ಆಯಾಸ ಮತ್ತು ತಲೆನೋವಿನಂತಹ ಗಂಭೀರ ಸಮಸ್ಯೆ ಇದ್ರಿಂದ ಕಾಡುತ್ತದೆ.

ಕೆಲಸವಿಲ್ಲದ ಸಮಯದಲ್ಲಿ ಈ ಪರದೆಯಿಂದ ದೂರವಿರುವುದು ಒಳ್ಳೆಯದು. ಹಾಗೆ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ಆದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಬೇಕು.

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ನೈಟ್ ಟೈಮ್ ಮೋಡ್ ವೈಶಿಷ್ಟ್ಯವನ್ನು ಹೊಂದಿವೆ. ಫೋನನ್ನು ನೈಟ್ ಮೋಡ್‌ನಲ್ಲಿ ಇರಿಸುವುದರಿಂದ ಚರ್ಮದ ಹಾನಿಯಿಂದ  ತಪ್ಪಿಸಬಹುದು. ಫೋನ್ ಅಥವಾ ಲ್ಯಾಪ್‌ಟಾಪ್‌ನ ಪರದೆ ಮತ್ತು ಮುಖದ ನಡುವೆ ಅಂತರ ಕಾಯ್ದುಕೊಳ್ಳಬೇಕು.

ಕಣ್ಣುಗಳ ಸುತ್ತಲಿನ ಚರ್ಮವನ್ನು ಹಾನಿಕಾರಕ ಬೆಳಕಿನಿಂದ ರಕ್ಷಿಸುವ ಕ್ರೀಂಗಳನ್ನು ರಾತ್ರಿ ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...