alex Certify BIG NEWS : ಕೇಂದ್ರ ಮಾಹಿತಿ ಸಚಿವಾಲಯದಿಂದ 635 ‘ವೆಬ್ ಲಿಂಕ್’ ಗಳ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕೇಂದ್ರ ಮಾಹಿತಿ ಸಚಿವಾಲಯದಿಂದ 635 ‘ವೆಬ್ ಲಿಂಕ್’ ಗಳ ನಿರ್ಬಂಧ

ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಸೆಂಬರ್ 2021 ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 ಯುಆರ್ ಎಲ್ ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ಸಚಿವ ಅನುರಾಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದರು.

ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಸಂಬಂಧಿತ ವಿಭಾಗದ ಅಡಿಯಲ್ಲಿ ಸಚಿವಾಲಯವು ಎಷ್ಟು ವೆಬ್ಸೈಟ್ ಗಳು, ಯುಆರ್ ಎಲ್ ಗಳು, ಮತ್ತು ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಿದೆ ಎಂದು ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಡಿಸೆಂಬರ್ 2021 ರಿಂದ 10 ವೆಬ್ ಸೈಟ್ ಗಳು ಮತ್ತು 5 ಅಪ್ಲಿಕೇಶನ್ ಗಳು ಸೇರಿದಂತೆ 635 ಯುಆರ್ ಎಲ್ ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದರು.

ಮಾಹಿತಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಸಂಬಂಧಿಸಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷದ ಜೂನ್ ವೇಳೆಗೆ ಸಚಿವಾಲಯ ಮತ್ತು ಅದರ ವಿವಿಧ ಮಾಧ್ಯಮ ಘಟಕಗಳು / ಸಂಸ್ಥೆಗಳಲ್ಲಿ 1,841 ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು. ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ 94 ಹುದ್ದೆಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಬ್ಯಾಕ್ಲಾಗ್ ಹುದ್ದೆಗಳು ಸೇರಿದಂತೆ ಕಳೆದ ಐದು ವರ್ಷಗಳಲ್ಲಿ 446 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...