alex Certify ಸಿಎಂ ಸಿದ್ದರಾಮಯ್ಯ ಪರ ಬಿಜೆಪಿ ಶಾಸಕ ಯತ್ನಾಳ್ ಬ್ಯಾಟಿಂಗ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಸಿದ್ದರಾಮಯ್ಯ ಪರ ಬಿಜೆಪಿ ಶಾಸಕ ಯತ್ನಾಳ್ ಬ್ಯಾಟಿಂಗ್!

ಯಾದಗಿರಿ : ಯಾರು ಸಮರ್ಥ ಆಡಳಿತ ಕೊಡುತ್ತಾರೋ ಅವರು ಸಿಎಂ ಆಗಬೇಕು, ಆದರೆ ಕಾಂಗ್ರೆಸ್ ನವರೇ ಸಿದ್ದರಾಮಯ್ಯರನ್ನ ನುಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನ ಕಾಂಗ್ರೆಸ್ ಗೆ ಬೆಂಬಲವನ್ನು ನೀಡಿದ್ದಾರೆ. 135 ಶಾಸಕರ ಬೆಂಬಲವನ್ನ ಕರ್ನಾಟಕದ ಜನ ಸಿದ್ದರಾಮಯ್ಯನವರಿಗೆ ನೀಡಿ, ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ನಾವು ಜಾತಿ ಮೇಲೆ ಮಾತನಾಡುವುದಿಲ್ಲ. ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಯಾರು ಸಮರ್ಥ ಆಡಳಿತ ಕೊಡ್ತಾರೋ ಅವರು ಸಿಎಂ ಆಗಬೇಕು. ಆದರೆ ಕಾಂಗ್ರೆಸ್‍ನವರೇ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು  ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...