ವಿಶ್ವದಾದ್ಯಂತ ಬೇರೆ ಬೇರೆ ದೇಶಗಳು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ನೀತಿ ನಿಯಮಗಳಲ್ಲಿ ಜಾರಿ ಮಾಡಿ ಅದರಂತೆ ನಡೆದುಕೊಳ್ಳಲು ನಿರ್ಮಾಪಕರಿಗೆ ಮತ್ತು ಪ್ರಸಾರಕರಿಗೆ ಆದೇಶಿಸುತ್ತವೆ. ಈ ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿದ್ದರೂ ಕೊಂಚ ಹೋಲುವತ್ತಿರುತ್ತವೆ. ಆದ್ರೆ ಈ ದೇಶದಲ್ಲಿ ಟಿವಿ ಮಾಧ್ಯಮಕ್ಕೆ ಸಂಬಂಧಿಸಿದಂತೆ ವಿಚಿತ್ರ ನಿಯಮಗಳನ್ನು ಜಾರಿಗೆ ತರಲಾಗಿದೆ.
ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!
ಹೌದು….. ಇರಾನ್, ಟಿವಿ ಪ್ರಸಾರ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ಸೆನ್ಸಾರ್ಶಿಪ್ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, ಮಹಿಳೆಯರು ಟಿವಿಯಲ್ಲಿ ಪಿಜ್ಜಾ ತಿನ್ನುವುದನ್ನು ಮತ್ತು ಲೆದರ್ ಗ್ಲೌಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ಕೆಲಸದ ಸ್ಥಳಕ್ಕೆ ಪುರುಷರು, ಮಹಿಳೆಯರಿಗೆ ಟೀ ನೀಡುವ ದೃಶ್ಯಗಳನ್ನು ತೋರಿಸದಂತೆ ಎಚ್ಚರಿಕೆ ನೀಡಲಾಗಿದೆ.
BIG NEWS: ಡಿಪೋ ಮ್ಯಾನೇಜರ್ ಮುಂದೆಯೆ ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ ನ ಪಿಆರ್ ಮುಖ್ಯಸ್ಥ ಅಮೀರ್ ಹುಸೇನ್ ಶಂಶಾದಿ ಈ ಹೇಳಿಕೆಯನ್ನು ನೀಡಿದ್ದಾರೆ. ಯಾವುದೇ ಕೆಂಪು ಬಣ್ಣದ ಪಾನೀಯಗಳನ್ನು ಕುಡಿಯುವ ಮಹಿಳೆಯರನ್ನು ಪರದೆಯ ಮೇಲೆ ತೋರಿಸುವಂತಿಲ್ಲ. ಇದರ ಜೊತೆಗೆ ಸ್ಯಾಂಡ್ವಿಚ್ ಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಮನೆಯಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವ ದೃಶ್ಯ ಅಥವಾ ಫೋಟೋ ಪ್ರಸಾರ ಮಾಡುವಂತಿಲ್ಲ. ಫೋಟೋ, ವಿಡಿಯೋ ಪ್ರಸಾರ ಮಾಡುವ ಮೊದಲು ಐಆರ್ ಐಬಿ ಅನುಮತಿ ಪಡೆಯಬೇಕು.
BIG NEWS: ʼಸೆಕ್ಸ್ʼ ಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಯುವಜನರ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ಸದ್ಯದ ಪರಿಸ್ಥಿತಿಯಲ್ಲಿ,ಇರಾನಿನ ಟಾಕ್ ಶೋ ಪಿಶ್ಗು ಕೂಡ ತನ್ನ ಹೊಸ ಸಂಚಿಕೆಯಲ್ಲಿ ಅತಿಥಿಯ ಮುಖವನ್ನು ತೋರಿಸಲು ಹಿಂದೇಟು ಹಾಕುತ್ತಿದೆ. ಇದು ಇತ್ತೀಚೆಗೆ ನಟಿ ಎಲ್ನಾಜ್ ಹಬೀಬಿ ಕಾರ್ಯಕ್ರಮದ ನಿರೂಪಕ ಪೆಜ್ಮಾನ್ ಜಮ್ಶೆಡಿ ಅವರೊಂದಿಗೆ ಮಾತನಾಡುವಾಗ ಅವರ ಧ್ವನಿ ಮಾತ್ರ ಕೇಳಿಸಲಾಗಿತ್ತು. ಮುಖವನ್ನು ಧಾರಾವಾಹಿ ಉದ್ದಕ್ಕೂ ತೋರಿಸಲಿಲ್ಲ.