alex Certify BIG NEWS: ಡಿಪೋ ಮ್ಯಾನೇಜರ್ ಮುಂದೆಯೆ ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಪೋ ಮ್ಯಾನೇಜರ್ ಮುಂದೆಯೆ ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ ನೌಕರನೊಬ್ಬ ಡಿಪೋ ಮ್ಯಾನೇಜರ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದಿರಾ ನಗರದ ಡಿಪೋದಲ್ಲಿ ನಡೆದಿದೆ.

ಕೇಶವ್ ಎಂಬ ಬಿಎಂಟಿಸಿ ನೌಕರ ಡಿಪೋ ಮ್ಯಾನೇಜರ್ ಎದುರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ್ರೆ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಕಳೆದ ಏಪ್ರಿಲ್ ನಲ್ಲಿ ನಡೆದ ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೇಶವ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅದಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಕೇಶವ್ ಕೆಲಸವನ್ನು ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಬೇಸತ್ತ ಕೇಶವ್ ಇಂದು ಇಂದಿರಾನಗರದ ಡಿಪೋಗೆ ಬಂದಿದ್ದು, ಮ್ಯಾನೇಜರ್ ಎದುರು ಮಾತನಾಡುತ್ತಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...