alex Certify ತಲೆ ತಿರುಗಿಸುತ್ತೆ ಅನ್ಯಗ್ರಹ ಜೀವಿಗಳ ಜೊತೆ ನಡೆದ ಅನುಭವ ಹಂಚಿಕೊಂಡ ಈ ವ್ಯಕ್ತಿಯ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುತ್ತೆ ಅನ್ಯಗ್ರಹ ಜೀವಿಗಳ ಜೊತೆ ನಡೆದ ಅನುಭವ ಹಂಚಿಕೊಂಡ ಈ ವ್ಯಕ್ತಿಯ ಕತೆ..!

ಏಲಿಯನ್​​ಗಳು ತನ್ನ ಕೈನಲ್ಲಿ ನ್ಯಾನೋ ಚಿಪ್​ ಅಳವಡಿಸಿದ್ದು ಇದು ನನ್ನನ್ನು ಪತ್ನಿಯಿಂದ ದೂರ ಮಾಡಿದ್ದು ಮಾತ್ರವಲ್ಲದೇ ಕೆಲಸವನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದು ಅಮೆರಿಕದ ವ್ಯಕ್ತಿಯೊಬ್ಬ ವಿಚಿತ್ರ ಆರೋಪ ಮಾಡಿದ್ದಾನೆ.

ಸ್ಟೀವ್ ಕೋಲ್ಬರ್ನ್​ ಎಂಬಾತ ಬೂದು ಬಣ್ಣದ ಅನ್ಯಗ್ರಹ ಜೀವಿಗಳು ತನ್ನನ್ನು ನೂರಾರು ಬಾರಿ ಅಪಹರಣ ಮಾಡಿದೆ ಎಂದು ಹೇಳಿದ್ದಾನೆ.

ಏಲಿಯನ್ಸ್​ಗಳ ಬಗ್ಗೆ ಸ್ಟೀವ್​ ಮಾಹಿತಿ ನೀಡಿದ್ದಾರೆ. ಮೊದಲ ಬಾರಿಗೆ ಈ ಅನ್ಯಗ್ರಹದ ಜೀವಿಯನ್ನು ನಾನು ಅವಕಾಡೋ ಮರದ ಮೇಲೆ ಸುಳಿದಾಡುತ್ತಿರುವ ವೇಳೆಯಲ್ಲಿ ನೋಡಿದೆ.

ಕೂಡಲೇ ನನ್ನನ್ನು ಬಾಹ್ಯಾಕಾಶ ನೌಕೆಯ ಕಡೆಗೆ ಎಳೆದಂತೆ ಭಾಸವಾಯಿತು. ಬಳಿಕ ನನ್ನನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ನನಗೆ ಅಲ್ಲೇ ಇದ್ದ ಮೇಜಿನ ಮೇಲೆ ಮಲಗುವಂತೆ ಹೇಳಲಾಯ್ತು. ಇಲ್ಲಿ ಸ್ಟೇನ್​ಲೆಸ್​ ಸ್ಟೀಲ್​ನಂತೆಯೇ ಕಾಣುವ ಟ್ಯೂಬ್​ನ ಸಹಾಯದಿಂದ ನನ್ನ ಕೈಗೆ ನ್ಯಾನೋ ಚಿಪ್ ಅಳವಡಿಸಲಾಯ್ತು. ಇದಾದ ಬಳಿಕ ನನ್ನ ಯೋಚನಾ ಶಕ್ತಿಯೇ ಬದಲಾಗಿ ಹೋಗಿದೆ. ಹಾಗೂ ಇಲ್ಲಿ ಒಗ್ಗಿಕೊಳ್ಳುವುದು ನನಗೆ ಕಷ್ಟವಾಗಿದೆ ಎಂದು ಹೇಳಿದ್ದಾರೆ.

ಅಂದಹಾಗೆ ಸ್ಟೀವ್​ ಪತ್ನಿಗೆ ಕೂಡ ಈ ರೀತಿಯ ಅನುಭವ ಉಂಟಾಗಿದೆ. ಇದೇ ಕಾರಣಕ್ಕೆ ನಮ್ಮ ನಡುವೆ ವಿಚ್ಛೇದನ ಉಂಟಾಗಿದೆ. ಅವಳು ಇದಕ್ಕೆಲ್ಲ ನಾನೇ ಕಾರಣ ಎಂದು ದೂಷಿಸಿದಳು ಎಂದು ಸ್ಟೀವ್​ ಹೇಳಿದ್ರು. ನನ್ನ ಉದ್ಯೋಗವನ್ನೂ ನಾನು ಕಳೆದುಕೊಂಡೆ ಎಂದು ಹೇಳಿದ್ದಾರೆ.

ಇದು ನನ್ನ ಕಣ್ಣನ್ನು ತೆರೆಸಿದೆ. ನನಗೆ ಈಗ ನಾನು ಈ ಲೋಕಕ್ಕೆ ಸೇರಿದವನು ಹಾಗೆಯೇ ಅವರ ಲೋಕಕ್ಕೂ ಸೇರಿದವನು ಎಂದು ಎನಿಸಲು ಶುರುವಾಗಿದೆ. ಇದರಲ್ಲಿ ಯಾವುದು ನನ್ನ ನಿಜವಾದ ಭಾವನೆ ಎಂದು ಅರ್ಥ ಮಾಡಿಕೊಳ್ಳುವುದೇ ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ ಎಂದು ಸ್ಟೀವ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...