alex Certify ಗೂಗಲ್‌ ಅರ್ಥ್ ಸರ್ಚ್‌ ವೇಳೆ ಕಾರಿನಲ್ಲಿ ಕುಳಿತ ವಿಚಿತ್ರ ಜೀವಿ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್‌ ಅರ್ಥ್ ಸರ್ಚ್‌ ವೇಳೆ ಕಾರಿನಲ್ಲಿ ಕುಳಿತ ವಿಚಿತ್ರ ಜೀವಿ ಪತ್ತೆ….!

ಜಗತ್ತಿನಲ್ಲಿ ಏಲಿಯನ್‌ಗಳ ಅಸ್ತಿತ್ವದ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಏಲಿಯನ್‌ಗಳು ಅಸ್ತಿತ್ವದಲ್ಲಿವೆಯೋ? ಇಲ್ಲವೋ ಅನ್ನೋದಕ್ಕೆ ಇನ್ನೂ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. ಆದ್ರೆ ಆಗಾಗ ಏಲಿಯನ್‌ಗಳು ಭೂಮಿ ಮೇಲೆ ಪ್ರತ್ಯಕ್ಷವಾಗಿರುವ ಬಗ್ಗೆ ಫೋಟೋಗಳು ಹರಿದಾಡುತ್ತಲೇ ಇರುತ್ತವೆ.

ಇದೀಗ ಮಹಿಳೆಯೊಬ್ಬಳ ಕಾರಿನ ಹಿಂಬದಿಯ ಸೀಟಿನಲ್ಲಿ ಏಲಿಯನ್‌ ರೀತಿಯ ವಿಚಿತ್ರ ಜೀವಿಯೊಂದು ಕಾಣಿಸಿಕೊಂಡಿದೆ. ಈ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿವೆ. ಕ್ರಿಸ್ಟಲ್ ಪ್ಯಾಟರ್ಸನ್ ಜಾಲತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾಳೆ.

45 ವರ್ಷದ ಕ್ರಿಸ್ಟಲ್‌ ಅಮೆರಿಕದವಳು. ಗ್ಯಾರೇಜ್ ಮಾರಾಟದ ಸ್ಥಳವನ್ನು ಹುಡುಕಲು ಗೂಗಲ್ ಅರ್ಥ್ ಮೂಲಕ ಸ್ಕ್ರೋಲಿಂಗ್ ಮಾಡುತ್ತಿರುವಾಗ ತನ್ನ ಸಿಲ್ವರ್ ಬಣ್ಣದ ಕಾರಿನಲ್ಲಿ ವಿಚಿತ್ರವಾದದ್ದನ್ನು ಗಮನಿಸಿದ್ದಾಳೆ. ಹತ್ತಿರದಿಂದ ನೋಡಲು ಝೂಮ್ ಇನ್ ಮಾಡಿದಾಗ ಕಾರಿನ ಹಿಂಬದಿಯ ಕಿಟಕಿಯಿಂದ ದಿಟ್ಟಿಸುತ್ತಿರುವ ‘ಅನ್ಯಲೋಕದ ಜೀವಿ’ ಕಾಣಿಸಿದೆ. ಅದನ್ನು ನೋಡಿ ಕ್ರಿಸ್ಟಲ್‌ ದಿಗ್ಭ್ರಮೆಗೊಂಡಿದ್ದಾಳೆ.

ಈ ವಿಚಿತ್ರ ಜೀವಿ ಯಾವುದೆಂದು ಪತ್ತೆ ಮಾಡಿಕೊಡಿ ಅಂತಾ ಆಕೆ ಪೋಸ್ಟ್‌ ಮಾಡಿದ್ದಾಳೆ. ಕಾರಿನ ಹಿಂಭಾಗದಲ್ಲಿರುವ ಆಕೃತಿ  ವಿರೂಪವಾಗಿದೆ. ಹಾಗಾಗಿ ಇದು ಅನ್ಯಗ್ರಹದ ಏಲಿಯನ್‌ ಇರಬಹುದು ಅನ್ನೋದು ಆಕೆಯ ಲೆಕ್ಕಾಚಾರ. ಅಮೆರಿಕದ  ಮೈನೆಯಲ್ಲಿರುವ ಮ್ಯಾಪ್ಲೆಟನ್ ಪಟ್ಟಣದಲ್ಲಿ ಗುರುತಿಸಲ್ಪಟ್ಟಿರೋ ಫೋಟೋ ಇದು. ಇದು ಏಲಿಯನ್‌ ಹೌದೋ ಅಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...