alex Certify ಮಹಿಳೆಯರ 700 ಕ್ಕೂ ಅಧಿಕ ಒಳ ಉಡುಪು ಕದ್ದ ಕಳ್ಳ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ 700 ಕ್ಕೂ ಅಧಿಕ ಒಳ ಉಡುಪು ಕದ್ದ ಕಳ್ಳ ಅರೆಸ್ಟ್

ಜಪಾನಿನಲ್ಲಿ ಒಬ್ಬ ಭೂಪ ಹೆಂಗಸರ 700 ಒಳ ಉಡುಪುಗಳನ್ನು ಅಂಗಡಿಯಿಂದ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ.

56 ವರ್ಷದ ತೆತ್ಸು ಉರಟ ಎಂಬುವವನು ಓಯ್ತಾ ನಗರದಳ್ಳಿ ಆರು ಒಳ ಉಡುಪನ್ನು ಲಾಂಡ್ರಿಯಿಂದ ಕದಿಯುವಾಗ ಸಿಕ್ಕಿ ಬಿದ್ದಿದ್ದಾನೆ. ಇವನ ಬಂಧಿಸಿದ ಪೊಲೀಸರು ಆತನ ಮನೆಯಲ್ಲಿ ಹುಡುಕಿದಾಗ 730 ಒಳ ಉಡುಪು ಇದ್ದದ್ದನ್ನು ನೋಡಿದ್ದಾರೆ. ಪೊಲೀಸರು ತೋರಿಸಿದ ಚಿತ್ರದಲ್ಲಿ ಮನೆ ತುಂಬಾ ಒಳ ಉಡುಪು ಇರುವುದು ಕಾಣಿಸಿದೆ. ಪೋಲೀಸರ ಪ್ರಕಾರ ಇಷ್ಟೊಂದು ಒಳ ಉಡುಪುಗಳನ್ನು ಅವರು ಹಿಂದೆದೂ ವಶಕ್ಕೆ ಪಡೆದಿರಲಿಲ್ಲವಂತೆ.

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಗೆ ಮಾತೃ ವಿಯೋಗ

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಈತನ ಈ ವಿಚಿತ್ರ ಹವ್ಯಾಸದ ಬಗ್ಗೆ ಜನ ತಲೆಕೆಡಿಸಿಕೊಂಡಿದ್ದಾರೆ. ಲಾಂಡ್ರಿಗಳಲ್ಲಿ ಬಟ್ಟೆ ಕದ್ದದ್ದು ಹೇಗೆ, ಅಲ್ಲಿ ಕಾಮೆರಾಗಳಿವೆ ಎಂದು ಅಚ್ಚರಿ ಪಟ್ಟಿದ್ದಾರೆ.

ಇವನೊಬ್ಬನೇ ಅಲ್ಲ, ಈ ಹಿಂದೆ 65 ವರ್ಷದ ವೃದ್ದನೊಬ್ಬ ನ್ಯೂಜಿಲ್ಯಾಂಡ್ ನಲ್ಲಿ ಒಳ ಉಡುಪನ್ನು ಕದ್ದ ಘಟನೆ 2019 ರಲ್ಲಿ ನಡೆದಿತ್ತು. ಈ ಬಗ್ಗೆ ಆತ ತಪ್ಪೊಪ್ಪಿಗೆ ಕೂಡ ನೀಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...