alex Certify ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಗೆ ಮಾತೃ ವಿಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಗೆ ಮಾತೃ ವಿಯೋಗ

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಈ ವಿಚಾರವನ್ನು ಅಕ್ಷಯ್​ ಕುಮಾರ್​ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರುಣಾ ಭಾಟಿಯಾರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮುಂಬೈನ ಹಿರಾನಂದಾನಿ ಆಸ್ಪತ್ರೆಯಲ್ಲಿ ಅರುಣಾರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಇಂದು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ಈ ಲೋಕವನ್ನು ಬಿಟ್ಟು ತೆರಳಿದ್ದಾರೆ. ತನ್ನ ತಂದೆಯ ಜೊತೆ ಇನ್ನೊಂದು ಲೋಕದಲ್ಲಿ ಬದುಕಲು ತೆರಳಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆಯನ್ನು ನಾನು ಗೌರವಿಸುತ್ತೇನೆ ಎಂದು ನಟ ಅಕ್ಷಯ್​ ಕುಮಾರ್​ ಬರೆದುಕೊಂಡಿದ್ದಾರೆ.

ತಮ್ಮ ಮುಂಬರುವ ಸಿನಿಮಾ ʼಸಿಂಡರೆಲ್ಲಾʼ ಶೂಟಿಂಗ್​ಗಾಗಿ ಬ್ರಿಟನ್​ನಲ್ಲಿದ್ದ ಅಕ್ಷಯ್​ ಕುಮಾರ್ ತಾಯಿಯ ಅನಾರೋಗ್ಯ ಸುದ್ದಿ ಕೇಳುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸಾಗಿದ್ದರು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲೂ ಹೇಳಿಕೊಂಡಿದ್ದ ಅಕ್ಷಯ್​ ಕುಮಾರ್​ ನಮ್ಮ ಕುಟುಂಬ ಕಠಿಣ ಸಮಯವನ್ನು ಕಳೆಯುತ್ತಿದೆ ಎಂದೂ ಹೇಳಿಕೊಂಡಿದ್ದರು. ನಿಮ್ಮೆಲ್ಲರ ಪ್ರಾರ್ಥನೆ ನಮ್ಮ ಕುಟುಂಬಕ್ಕೆ ಸಹಾಯ ಮಾಡಲಿದೆ ಎಂದಿದ್ದರು.

View this post on Instagram

A post shared by Akshay Kumar (@akshaykumar)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...