alex Certify ತನ್ನಿಂತಾನೇ ಕೆಳಗೆ ಬಿದ್ದ ಬಿಯರ್‌ ಮಗ್; ಆತ್ಮದ ಕೆಲಸ ಎಂದ ಪಬ್‌ ಮಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನಿಂತಾನೇ ಕೆಳಗೆ ಬಿದ್ದ ಬಿಯರ್‌ ಮಗ್; ಆತ್ಮದ ಕೆಲಸ ಎಂದ ಪಬ್‌ ಮಾಲಕಿ

ಅಗೋಚರ ಶಕ್ತಿಯೊಂದು ಬಿಯರ್‌ ಮಗ್‌ ಒಂದನ್ನು ತನ್ನಿಂತಾನೇ ಬೀಳಿಸುತ್ತಿರುವ ದೃಶ್ಯವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಅದೀಗ ನೆಟ್ಟಿಗರನ್ನು ಚಕಿತಗೊಳಿಸಿದೆ.

ಬ್ರಿಟನ್‌ನ ಸುದರ್ಲೆಂಡ್‌ನ ಬ್ಲೂ ಹೌಸ್ ಪಬ್‌ನಿಂದ ಈ ಫುಟೇಜ್‌ ಹೊರಬಂದಿದೆ. ಪಬ್‌ ಮಾಲಕಿ ಡಾರ್ಲ ಆಂಡರ್ಸನ್ ಹೇಳುವ ಪ್ರಕಾರ, ಬಿಯರ್‌ ಮಗ್‌ ತನ್ನಿಂತಾನೇ ಕೆಳಗೆ ಬಿದ್ದಿದೆ. ವಿಡಿಯೋ ಕ್ಲಿಪ್‌ನ ಘಟನಾವಳಿಯು ಆಕೆ ಹೇಳಿದಂತೆಯೇ ನಡೆದಿದೆ.

ಯಾವುದೇ ಬಾಹ್ಯ ಶಕ್ತಿಯ ನೆರವಿಲ್ಲದೇ ಬಿಯರ್‌ ಮಗ್‌ ತನ್ನಿಂತಾನೇ ಮೇಜಿನ ಮೇಲೆ ಬಿದ್ದಿದ್ದು, ನೆಲದ ಮೇಲೆಲ್ಲಾ ಬಿಯರ್‌ ಚಿಲ್ಲಿದೆ. ಕ್ಲಿಪ್‌ನಲ್ಲಿ ಕಾಣುವ ಒಬ್ಬರೇ ವ್ಯಕ್ತಿ ಬಿಯರ್‌ ಮಗ್‌ನಿಂದ ದೂರ ಕುಳಿತಿದ್ದರು.

ಈ ಬಗ್ಗೆ ತಮ್ಮದೇ ಥಿಯರಿಗಳನ್ನು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಆಂಡರ್ಸನ್ ಪ್ರಕಾರ, ಈ ಕಟ್ಟಡದ ಮೊದಲ ಮಾಲಕಿ ಈಗಲೂ ಸಹ ಆತ್ಮವಾಗಿ ಅಲ್ಲೆಲ್ಲಾ ಓಡಾಡುತ್ತಿರುವ ಕಾರಣ ಹೀಗೆ ಬಿಯರ್‌ ಮಗ್‌ ತನ್ನಿಂತಾನೇ ಕೆಳಗೆ ಬಿದ್ದಿದೆ.

“ನಾನು ಪಿಂಟ್‌ನತ್ತ ನೋಡುತ್ತಿದ್ದಂತೆಯೇ ಅದು ತನ್ನಿಂತಾನೇ ಕೆಳಗೆ ಬಿದ್ದಿದೆ, ಹಾಗೂ ಆ ವೇಳೆ ಅಲ್ಲಿ ಮೂರ್ನಾಲ್ಕು ಮಂದಿ ಇದ್ದೆವು. ಬೇರೊಬ್ಬರು ಬಂದು ಬಿಯರ್‌ ಪಿಂಟ್‌ ಅನ್ನು ತಳ್ಳಿದ ಸಾಧ್ಯತೆಗಳು ಇಲ್ಲ. ಇದು ಏಕಾಯಿತು ಹಾಗೂ ಹೇಗಾಯಿತು ಎಂದು ಹೇಳಲು ನನ್ನಲ್ಲಿ ವಿವರಣೆ ಇಲ್ಲ, ನಮ್ಮ ಗ್ರಾಹಕರೂ ಸಹ ಇದನ್ನು ನಂಬಲು ಆಗುತ್ತಿಲ್ಲ,” ಎನ್ನುತ್ತಾರೆ ಆಂಡರ್ಸನ್.

“ಸದ್ಯ, ಸಿಸಿಟಿವಿ ಕ್ಯಾಮೆರಾ ಇರೋದ್ರಿಂದ ನನ್ನ ಮಾತನ್ನು ನಂಬುವಂತಾಗಿದೆ,” ಎಂದಿದ್ದಾರೆ ಆಂಡರ್ಸನ್.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...