alex Certify ಖಾತೆ ತೆರೆಯಲು ಬ್ಯಾಂಕಿಗೆ ಹೋದ ದಿನಗೂಲಿ ಕಾರ್ಮಿಕನಿಗೆ ಕಾದಿತ್ತು ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾತೆ ತೆರೆಯಲು ಬ್ಯಾಂಕಿಗೆ ಹೋದ ದಿನಗೂಲಿ ಕಾರ್ಮಿಕನಿಗೆ ಕಾದಿತ್ತು ಅಚ್ಚರಿ…!

ಪಾಟ್ನಾ: ಬಿಹಾರದಲ್ಲಿ ರೈತನ ಬ್ಯಾಂಕ್ ಖಾತೆಗೆ 50 ಕೋಟಿ ರೂ. ಜಮೆಯಾದ ಬಳಿಕ ಇದೀಗ, ದಿನಗೂಲಿ ಕಾರ್ಮಿಕನ ಬ್ಯಾಂಕ್ ಖಾತೆಗೆ 9.99 ಕೋಟಿ ರೂ. ಜಮೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಬಡ ಗ್ರಾಮಸ್ಥರು ತಮ್ಮ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಪಡೆದಿರುವ ಸರಣಿ ಪ್ರಕರಣಗಳ ನಂತರ ಇದೀಗ ಮತ್ತೊಂದು ಬೆಳಕಿಗೆ ಬಂದಿದೆ. ದಿನಗೂಲಿ ಕಾರ್ಮಿಕನೊಬ್ಬ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ತನ್ನ ಖಾತೆಯಲ್ಲಿ 9.99 ಕೋಟಿ ರೂಪಾಯಿ ಇರುವುದನ್ನು ಕಂಡು ಅಚ್ಚರಿಗೊಳಗಾಗಿದ್ದಾನೆ. ಕುತೂಹಲಕಾರ ಸಂಗತಿ ಎಂದರೆ, ವಿಪಿನ್ ಚೌಹಾಣ್ ಎಂಬ ಕಾರ್ಮಿಕ ತಾನು ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆದಿಲ್ಲ ಎಂದು ಹೇಳಿಕೊಂಡಿದ್ದಾನೆ.

ಬಿಹಾರದ ಸುಪಾಲ್ ಪಟ್ಟಣದ ಸಿಸೌನಿ ಪ್ರದೇಶದ ಚೌಹಾಣ್ ಗುರುವಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಾಗಿ ಜಾಬ್ ಕಾರ್ಡ್ ತೆರೆಯಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಸೇವಾ ಕೇಂದ್ರಕ್ಕೆ (ಸಿಎಸ್‌ಪಿ) ಹೋಗಿದ್ದಾರೆ.

ಪತಿ ಶವದ ಜೊತೆ ಮಲಗ್ಬೇಕು…! ಜಗಳದ ನಂತ್ರ ಸಂಭೋಗ ಬೆಳೆಸ್ಬೇಕು: ಇಲ್ಲಿದೆ ವಿಚಿತ್ರ ಪದ್ಧತಿ

ವಿಪಿನ್ ಚೌಹಾಣ್ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ಅವರ ಆರ್ಥಿಕ ಸ್ಥಿತಿಯನ್ನು ಸಿಎಸ್ಪಿ ಪರಿಶೀಲಿಸಿದೆ. ಈ ವೇಳೆ ವಿಪಿನ್ ಚೌಹಾಣ್ ಹೆಸರಿನಲ್ಲಿ ಒಂದು ಖಾತೆಯು ಈಗಾಗಲೇ ಅಸ್ತಿತ್ವದಲ್ಲಿರುವುದು ಕಂಡುಬಂದಿದೆ. ಇದರಿಂದ ಚೌಹಾಣ್ ದಿಗ್ಭ್ರಾಂತರಾಗಿದ್ದಾರೆ. ಅವರ ಹೆಸರಿನಲ್ಲಿದ್ದ ಉಳಿತಾಯ ಖಾತೆಯು 9.99 ಕೋಟಿ ರೂ. ಠೇವಣಿ ಹೊಂದಿತ್ತು.

“ನಾನು ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿದ್ದೇನೆ. ಅಧಿಕಾರಿಗಳು ಖಾತೆಯ ವಿವರಗಳನ್ನು ಪರಿಶೀಲಿಸಿದ್ದಾರೆ. ನನ್ನ ಹೆಸರಿನ ಬ್ಯಾಂಕ್ ಖಾತೆಯನ್ನು ಅಕ್ಟೋಬರ್ 13, 2016 ರಂದು ತೆರೆಯಲಾಗಿದ್ದು 2017ರ ಫೆಬ್ರವರಿಯಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆದಿದೆ. ಬ್ಯಾಂಕ್ ಅಧಿಕಾರಿಗೆ ನನ್ನ ಛಾಯಾಚಿತ್ರ, ಸಹಿ ಅಥವಾ ಹೆಬ್ಬೆರಳಿನ ಗುರುತು ಸಿಗಲಿಲ್ಲ. ಆಧಾರ್ ಕಾರ್ಡ್ ಸಂಖ್ಯೆ ಮಾತ್ರ ನನ್ನದು. ಪ್ರಸ್ತುತ, 9.99 ಕೋಟಿ ರೂ.ಗಳು ಖಾತೆಯಲ್ಲಿ ಉಳಿದಿವೆ” ಎಂದು ಚೌಹಾಣ್ ಹೇಳಿದ್ದಾರೆ.

“ಇದೀಗ ನಾವು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದೇವೆ. ಈ ಖಾತೆಯೊಂದಿಗಿನ ವಹಿವಾಟಿನಲ್ಲಿ ಇತರ ಖಾತೆಗಳನ್ನು ಬಳಸಲಾಗಿದೆಯೇ ಎಂದು ಕಂಡುಹಿಡಿಯಲು ಪ್ರಸ್ತುತ ಆಂತರಿಕ ತನಿಖೆ ನಡೆಯುತ್ತಿದೆ” ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...