alex Certify ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟ ಅಕ್ಷಯ್​ ಕುಮಾರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟ ಅಕ್ಷಯ್​ ಕುಮಾರ್​

ಮಾತೃವಿಯೋಗದ ಶೋಕದಲ್ಲಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಜನ್ಮದಿನದ ಪ್ರಯುಕ್ತ ಭಾವನಾತ್ಮಕ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ.

ತಾಯಿ ಜೊತೆಗೆ ಇರುವ ಸುಂದರವಾದ ಫೋಟೊ ಶೇರ್​ ಮಾಡಿರುವ ಅಕ್ಷಯ್​ ಮನಮಿಡಿಯುವ ಸಾಲುಗಳನ್ನು ಬಡೆದಿದ್ದಾರೆ.

ಅಕ್ಷಯ್​ ಕುಮಾರ್​ರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದರು. ಈ ಬಗ್ಗೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಬಾಲಿವುಡ್​ ಖಿಲಾಡಿ ಜನತೆಗೆ ಮಾಹಿತಿ ನೀಡಿದ್ದರು.

ಈ ರೀತಿ ಆಗೋದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ ಆದರೆ ನನ್ನ ತಾಯಿ ಎಲ್ಲಿದ್ದಾರೋ ಅಲ್ಲಿಂದಲೇ ನನಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ ಎಂಬುದು ನನಗೆ ಖಾತ್ರಿಯಿದೆ. ಸಂತಾಪ ಸೂಚಿಸಿದ ಹಾಗೂ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಜೀವನ ನಡೆಯುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...