alex Certify ಬಿಲ್​ ಗೇಟ್ಸ್ ಮಾಲೀಕತ್ವದ ಈ ಖಾಸಗಿ ದ್ವೀಪದ ಪ್ರಸ್ತುತ ದರವೆಷ್ಟು ಗೊತ್ತಾ….!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಲ್​ ಗೇಟ್ಸ್ ಮಾಲೀಕತ್ವದ ಈ ಖಾಸಗಿ ದ್ವೀಪದ ಪ್ರಸ್ತುತ ದರವೆಷ್ಟು ಗೊತ್ತಾ….!?

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸುಮಾರು 140 ಬಿಲಿಯನ್​ ಡಾಲರ್​ಗೂ ಅಧಿಕ ಮೌಲ್ಯದ ಆಸ್ತಿಯನ್ನ ಬಿಲ್​ಗೇಟ್ಸ್ ಹೊಂದಿದ್ದಾರೆ. ಬಿಲ್​ ಗೇಟ್ಸ್​ ಹಾಗೂ ಮಿಲಿಂದಾ ಗೇಟ್ಸ್​ ವಿಶ್ವಾದ್ಯಂತ ಅನೇಕ ಕಡೆಗಳಲ್ಲಿ ಕಂಪನಿ, ಹೋಟೆಲ್​ ಹಾಗೂ ಜಾಗಗಳನ್ನ ಹೊಂದಿದ್ದಾರೆ.

ಬಿಲ್​ ಗೇಟ್ಸ್ ಹಾಗೂ ಮಿಲಿಂದಾ ದಂಪತಿಯ ವಿಚ್ಛೇದನ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಅನೇಕರು ಇವರ ಆಸ್ತಿ ಹೇಗೆ ವಿಭಜನೆ ಆಗಬಹುದು ಎಂಬುದನ್ನೇ ತಲೆಕೆಡಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ ಮಿಲಿಂದಾ ಗೇಟ್ಸ್​ ಬಿಲ್​ ಗೇಟ್ಸ್ ಜೊತೆ ಕೆಲ ಪೂರ್ವಭಾವಿ ಒಪ್ಪಂದಗಳಿಗೆ ಸಹಿ ಹಾಕಿಲ್ಲ ಎಂದು ಹೇಳಲಾಗ್ತಿದೆ.

ಬಿಲ್​ ಗೇಟ್ಸ್​ರ ಪ್ರಮುಖ ಆಸ್ತಿಗಳಲ್ಲಿ ಒಂದು ಅಮೆರಿಕದ ಬೆಲೀಜ್ ಖಾಸಗಿ ದ್ವೀಪವಾಗಿದೆ. ಗ್ರ್ಯಾಂಡ್​ ಬೊಗ್ ಕಯ್ ಎಂಬ ಹೆಸರಿನ ಈ ದ್ವೀಪವು ಸರಿ ಸುಮಾರು 314 ಎಕರೆ ವ್ಯಾಪ್ತಿಯದ್ದಾಗಿದೆ. ಈ ಅತೀ ಸುಂದರ ದ್ವೀಪವನ್ನ ಬಿಲ್​ ಗೇಟ್ಸ್ 2006ರಲ್ಲೇ ಖರೀದಿ ಮಾಡಿದ್ದರು. 2006ರಲ್ಲಿ ಈ ಆಸ್ತಿಯನ್ನ ಬಿಲ್​ ಗೇಟ್ಸ್ 1,38,09,16,389 ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಆದರೆ ಪ್ರಸ್ತುತ ಈ ಆಸ್ತಿ ಮೌಲ್ಯವು 1,86,70,09,239.92 ರೂಪಾಯಿ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...