alex Certify ಒಂದಲ್ಲ – ಎರಡಲ್ಲ ಬರೋಬ್ಬರಿ 6 ಮದುವೆಯಾಗಿದ್ದ ಭೂಪ ಅಂದರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ – ಎರಡಲ್ಲ ಬರೋಬ್ಬರಿ 6 ಮದುವೆಯಾಗಿದ್ದ ಭೂಪ ಅಂದರ್….!

 

ಒಂದು ಮದುವೆಯಾದರೇ ಸಂಭಾಳಿಸುವುದು ಕಷ್ಟ ಎಂದು ಬಲ್ಲವರು ಹೇಳುತ್ತಾರೆ. ಆದರೆ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ತಾನು ಮೊದಲೇ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು ಆರು ಮಹಿಳೆಯರಿಗೂ ವಂಚಿಸಿದ್ದಾನೆ.

ಇದೀಗ ಈತನ ಗುಟ್ಟು ರಟ್ಟಾಗಿದ್ದು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇಂಥದೊಂದು ಘಟನೆ ಬಿಹಾರದಲ್ಲಿ ನಡೆದಿದ್ದು, ಛೋಟು ಕುಮಾರ್ ಎಂಬಾತ ವಿಕಾಸ್ ಎಂಬಾತನ ಸಹೋದರಿ ಮಂಜು ಜೊತೆ ವಿವಾಹವಾಗಿದ್ದ.

ಸೋಮವಾರದಂದು ಛೋಟು ಕುಮಾರ್ ಮತ್ತೊಬ್ಬ ಮಹಿಳೆ ಜೊತೆ ಜಮುಯಿ ರೈಲ್ವೆ ನಿಲ್ದಾಣದಲ್ಲಿ ಇರುವುದನ್ನು ಮಂಜು ಸಹೋದರ ವಿಕಾಸ್ ಗಮನಿಸಿದ್ದಾನೆ. ಕೂಡಲೇ ಕುಟುಂಬಸ್ಥರಿಗೆ ಮಾತನಾಡಿ ಛೋಟುವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಬಳಿಕ ವಿಚಾರಿಸಿದ ವೇಳೆ ಈತ ನಾಲ್ಕು ರಾಜ್ಯಗಳಲ್ಲಿ ಒಟ್ಟು ಆರು ಮಹಿಳೆಯರನ್ನು ಮದುವೆಯಾಗಿ ವಂಚಿಸಿರುವ ವಿಚಾರ ತಿಳಿದು ಬಂದಿದೆ. ಇದೀಗ ಭೂಪನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...