alex Certify ನವ ವಧುವಿನ ಪತಿ ತೋರಿದ ಪ್ರೀತಿಗೆ ಸಾಕ್ಷಿಯಾದ್ರು ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವ ವಧುವಿನ ಪತಿ ತೋರಿದ ಪ್ರೀತಿಗೆ ಸಾಕ್ಷಿಯಾದ್ರು ಜನ

ನದಿ ದಾಟಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ವರ, ವಧುವನ್ನ ತನ್ನ ಹೆಗಲ ಮೇಲೆ ಹೊತ್ತು ನಡೆದ ಘಟನೆ ಬಿಹಾರದ ಕಿಶನ್​ಗಂಜ್​ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಗಳನ್ನ ಮುಗಿಸಿ ವರನ ಮನೆಗೆ ತೆರಳುತ್ತಿದ್ದ ವೇಳೆ ಜನರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದ್ರು.

ವರನ ಮನೆಗೆ ಸಾಗುವ ದಾರಿಯಲ್ಲಿ ಕಂಕೈ ನದಿ ಸಿಗುತ್ತೆ. ದೋಣಿ ಮೂಲಕ ಅರ್ಧ ದೂರ ಕ್ರಮಿಸಬಹುದು. ಆದರೆ ಇನ್ನರ್ಧ ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.

ವರನ ಕುಟುಂಬಸ್ಥರು ಕಾಲ್ನಡಿಗೆಯಲ್ಲಿಯೇ ಸಾಗಿದ್ದಾರೆ. ನೀರಿನ ಮಟ್ಟ ಕೂಡ ಹೆಚ್ಚಿದ್ದರಿಂದ ವಧುವಿಗೆ ಏನಾದರೂ ಸಮಸ್ಯೆಯಾಗಬಹುದು ಎಂದು ಅಂಜಿದ ವರ ಆಕೆಯನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾನೆ.

ಈ ವೇಳೆ ಅಲ್ಲೇ ಇದ್ದ ಅನೇಕರು ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ಈ ದೃಶ್ಯವನ್ನ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...