ವ್ಯಾಲೆಂಟೈನ್ಸ್ ದಿನ ಎಂದರೆ ಅದು ಪ್ರೀತಿ ಮಾಡುವವರಿಗೆ ಅವರ ಪ್ರೇಮ ನಿವೇದನೆಗೆ ಇರುವ ವರ್ಷದಲ್ಲೇ ಒಂದು ಸದಾವಕಾಶದ ದಿನ. ಯುವಕರು ಈ ಸಂದರ್ಭವನ್ನು ತಮ್ಮ ನೆಚ್ಚಿನ ಯುವತಿಗೆ ಪ್ರೊಪೋಸ್ ಮಾಡಲು ಬಳಸಿಕೊಳ್ಳುತ್ತಾರೆ. ಯುವತಿಯರು ಕೂಡ, ಆದರೆ ಭಾರತದಲ್ಲಿ ಯುವತಿಯರಿಂದ ಪ್ರೇಮ ನಿವೇದನೆ ಪ್ರಸ್ತಾವನೆ ಕಡಿಮೆ.
ಬಿಹಾರದ ದರ್ಭಂಗಾ ಎಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರಿಯಾಂಶು ಮಾತ್ರ ಫೆ.14ರಂದು ’ಬಾಯ್‌ಫ್ರೆಂಡ್ ಬಾಡಿಗೆಗೆ ಲಭ್ಯ’ ಎಂಬ ಪೋಸ್ಟರ್ ಹಿಡಿದುಕೊಂಡು ನಿಂತುಬಿಟ್ಟಿದ್ದಾನೆ! ಹೌದು, ಆತನಿಗೆ ಹುಡುಗಿಯೊಬ್ಬಳ ಜತೆಗೆ ಸ್ನೇಹ ಮಾಡುವ ಆಸೆ. ಆದರೆ, ಯಾರೂ ಕೂಡ ಸಿಕ್ಕಿಲ್ಲವಂತೆ. ಹಾಗಾಗಿ ಪ್ರೊಪೋಸ್ ಮಾಡಿಕೊಂಡು ಛೀಮಾರಿ ಹಾಕಿಸಿಕೊಳ್ಳುವುದಕ್ಕಿಂತ ತಾನೇ ಬಾಡಿಗೆಗೆ ಲಭ್ಯ ಎಂದು ಘೋಷಿಸಿಕೊಂಡು ಬಿಟ್ಟಿದ್ದಾನೆ. ದರ್ಭಂಗಾ ನಗರದ ಜನಪ್ರಿಯ ಪ್ರದೇಶಗಳಾದ ರಾಜ್‌ಫೋರ್ಟ್, ಟವರ್, ಬಿಗ್ ಬಜಾರ್‌ಗಳ ಎದುರು ನಿಂತುಕೊಂಡಿರುವ ಪ್ರಿಯಾಂಶು ಫೋಟೊ ವೈರಲ್ ಆಗಿದೆ.
ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ
ಖಿನ್ನತೆ ಮತ್ತು ಒತ್ತಡದಿಂದ ಅನೇಕ ಯುವಕರು ಬಳಲುತ್ತಿದ್ದಾರೆ. ಒಂಟಿಯಾಗಿ ಯುವಕರು ಬದುಕುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ ಪ್ರಕೃತಿ ಸಹಜವಾದ ಹುಡುಗ-ಹುಡುಗಿಯರ ನಡುವಿನ ಆಕರ್ಷಣೆಗೆ ಉತ್ತಮ ಸ್ನೇಹ-ಬಾಂಧವ್ಯದ ಬೆಸುಗೆ ಸಿಗಬೇಕು. ಆ ಮೂಲಕ ಪ್ರೇಮದ ಹಂಚಿಕೆಯಾಗಬೇಕು ಎನ್ನುವುದು ನನ್ನ ಕಾರ್ಯದ ಹಿಂದಿನ ಸಂದೇಶ ಎಂದಿದ್ದಾರೆ ಪ್ರಿಯಾಂಶು.