alex Certify VIDEO : ‘ಬಿಗ್ ಬಾಸ್’ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್ ಮಾಡಿದ ಸ್ಪರ್ಧಿಗಳು : ವ್ಯಾಪಕ ಟೀಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO : ‘ಬಿಗ್ ಬಾಸ್’ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್ ಮಾಡಿದ ಸ್ಪರ್ಧಿಗಳು : ವ್ಯಾಪಕ ಟೀಕೆ

‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳು ಲಿಪ್ ಲಾಕ್ ಮಾಡಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಲ್ಮಾನ್ ಖಾನ್ ಇದು ಫ್ಯಾಮಿಲಿ ಶೋ ಎಂದು ಹೇಳಿದರೂ ಕೂಡ ಬಿಗ್ ಬಾಸ್ ಸ್ಪರ್ಧಿಗಳು ಲಿಪ್ ಲಾಕ್ ಮಾಡಿದ್ದು, ಇದೇನಾ ಸಭ್ಯತೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಟಾಸ್ಕ್ ನಲ್ಲಿ ದುಬೈ ಮೂಲದ ರೂಪದರ್ಶಿ ಮತ್ತು ನಟ ಜಾದ್ ಹದಿದ್ ಸಹ ಸ್ಪರ್ಧಿ ಆಕಾಂಕ್ಷಾ ಅವರನ್ನು ಅವಿನಾಶ್ ಸಚ್ದೇವ್ ನೀಡಿದ ಸವಾಲಿಗೆ 30 ಸೆಕೆಂಡುಗಳ ಕಾಲ ಚುಂಬಿಸಿದ್ದಾರೆ. ಬಿಗ್ ಬಾಸ್ ಕೆಲ ಸ್ಪರ್ಧಿಗಳು ಇದನ್ನು ಎಂಜಾಯ್ ಮಾಡಿದರೆ, ಇನ್ನೂ ಕೆಲವರು ನಿಲ್ಲಿಸಿ ನಿಲ್ಲಿಸಿ ಎಂದು ಕೂಗಿದ್ದಾರೆ. ಸದ್ಯ ವಿಡಿಯೋ ಭಾರಿ ವೈರಲ್ ಆಗಿದೆ.

ಇತ್ತೀಚಿನ ಎಪಿಸೋಡ್ ನಲ್ಲಿ ಆಕಾಂಕ್ಷಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಅವಿನಾಶ್ ಸಚ್ದೇವ್ ಅವರು ‘ಜದ್ಗೆ ಆಕಾಂಕ್ಷಾ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಇಬ್ಬರೂ ತಮ್ಮ ಚುಂಬನದಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದರು. ನಂತರ, ಇದು ತಾಜಾ ಚುಂಬನ ಎಂದು ಭಾವಿಸಿದ್ದಾಗಿ ಜಡ್ ಹೇಳುತ್ತಾರೆ. ಮನೆಯ ಇತರ ಸ್ಪರ್ಧಿಗಳು ಇಬ್ಬರನ್ನೂ ಗೇಲಿ ಮಾಡಿದರು. ಸಲ್ಮಾನ್ ಖಾನ್ ಇದು ಫ್ಯಾಮಿಲಿ ಶೋ ಎಂದು ಹೇಳಿದರೂ ಕೂಡ ಬಿಗ್ ಬಾಸ್ ಸ್ಪರ್ಧಿಗಳು ಲಿಪ್ ಲಾಕ್ ಮಾಡಿದ್ದು, ಸ್ಪರ್ಧಿಗಳ ನಡವಳಿಕೆ ಸರಿಯಲ್ಲ.. ಇದೇನಾ ಸಭ್ಯತೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...