alex Certify BIGG NEWS : ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಹೆಸರು ಬದಲಿಸಿ `ರಾಜ್ಯ ಸರ್ಕಾರ’ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಹೆಸರು ಬದಲಿಸಿ `ರಾಜ್ಯ ಸರ್ಕಾರ’ ಆದೇಶ

ಬೆಂಗಳೂರು : ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ ಎಂದು ಪದನಾಮೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪುಸ್ತುತ ರಾಜ್ಯದಲ್ಲಿ 31 ನಗರಾಭಿವೃದ್ಧಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪ್ರಾಧಿಕಾರಗಳಲ್ಲಿನ ಆಯವ್ಯಯವು ರೂ. 50.00 ಕೋಟಿಗಳಿಂದ ರೂ.500.00 ಕೋಟಿಗಳವರೆಗೆ ಇರುತ್ತದೆ. ಹಲವಾರು ಪ್ರಾಧಿಕಾರಗಳಲ್ಲಿ ವಸತಿ ಯೋಜನ/ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಸಾರ್ವಜನಿಕ ಯೋಜನೆಯನ್ನು ಕೈಗೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಸದರಿ ಪ್ರಾಧಿಕಾರಗಳಿಗೆ ಕೆ.ಎ.ಎಸ್. ಹಾಗೂ ಕೆ.ಎಂ.ಎ.ಎಸ್. ಅಧಿಕಾರಿಗಳನ್ನು ಸರ್ಕಾರವು ನೇರವಾಗಿ ನೇಮಕ ಮಾಡುತ್ತಿದ್ದು, ಸದರಿ ಅಧಿಕಾರಿಗಳು ನೇರವಾಗಿ ಪ್ರಾಧಿಕಾರದಲ್ಲಿಯೇ ವರದಿ ಮಾಡಿಕೊಳ್ಳುತ್ತಿರುವುದರಿಂದ ಸದರಿ ಪ್ರಾಧಿಕಾರಗಳ ಮೇಲುಸ್ತುವಾರಿ/ಹತೋಟಿ ಕೈಗೊಳ್ಳಲು ಕಷ್ಟಸಾಧ್ಯವಾಗುತ್ತಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹಾಯಕ ನಿರ್ದೇಶಕರ ಕಛೇರಿಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಹಾಗೂ ನಗರ ಯೋಜನಾ ಪ್ರಾಧಿಕಾರಗಳು ಸಹ ಕಾರ್ಯನಿರ್ವಹಿಸುತ್ತಿದ್ದು, ಸದರಿ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಮಹಾಯೋಜನೆಯನ್ನು ತಯಾರಿಸುವ ಕೆಲಸ ವುಗತಿಯಲ್ಲಿರುವುದರಿಂದ ಹಲವಾರು ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಬೇಕಾಗಿರುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಯೋಜನಾ ಪ್ರಾಧಿಕಾರಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಅನುಕೂಲವಾಗುವಂತೆ  ಡಿಜಿಟಲಿಕರಣಗೊಳಿಸಲಾಗುತ್ತಿರುತ್ತದೆ. ಸದರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿರುತ್ತದೆ.

ನಗರಾಭಿವೃದ್ಧಿ  ಇಲಾಖೆ ಅಧೀನದಲ್ಲಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಬಿ.ಡಿ.ಎ, ಬಿ.ಎಂ.ಆರ್.ಡಿ.ಎ, ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯು ಕ್ಷೇತ್ರ ಇಲಾಖೆಗಳಾಗಿ ಕಾರ್ಯನಿರ್ವಹಿಸುತ್ತಿರುತ್ತವೆ.

ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಸುಸೂತ್ರವಾಗಿ ಕಾರ್ಯನಿರ್ವಹಿಸುವಂತ ಮೇಲುಸ್ತುವಾರಿ ವಹಿಸಲು ಅನುವಾಗುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವೆಂದು ಪದನಾಮೀಕರಿಸುವುದು ಹಾಗೂ ಸದರಿ  ಇಲಾಖೆಯಲ್ಲಿ ಮಂಜೂರಾದ 35 ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಒಂದು ಹುದ್ದೆಯನ್ನು ಉನ್ನತೀಕರಿಸಿ ಸದರಿ ಹುದ್ದೆಗೆ IAS Senior Scale ವೃಂದದ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಿ, ಸದರಿ ಹುದ್ದೆಯ ಪದನಾಮವನ್ನು ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವೆಂದು ಪದನಾಮಿಕರಿಸುವುದರೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ಸರ್ಕಾರಕ್ಕೆ ಸಲ್ಲಿಸುವ ಎಲ್ಲಾ ಪ್ರಸ್ತಾವನೆಗಳನ್ನು (ಬಿಡಿಎ, ಬಿಬಿಎಂಪಿ, ಬಿ.ಎಂ.ಆರ್.ಡಿ.ಎ, ಬಿ.ಎಂ.ಐ.ಸಿ.ಎ.ಪಿ.ಎ. ಹೊರತುಪಡಿಸಿ) ಆಯುಕ್ತರ ಮೂಲಕ ಸಲ್ಲಿಸುವಂತೆ ಸೂಚಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...