alex Certify BIGG NEWS : ಡಾರ್ಕ್ ವೆಬ್ ನಲ್ಲಿ 81.5 ಕೋಟಿ ಭಾರತೀಯರ `ಆಧಾರ್, ಪಾಸ್ಪೋರ್ಟ್’ ಡೇಟಾ ಸೋರಿಕೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಡಾರ್ಕ್ ವೆಬ್ ನಲ್ಲಿ 81.5 ಕೋಟಿ ಭಾರತೀಯರ `ಆಧಾರ್, ಪಾಸ್ಪೋರ್ಟ್’ ಡೇಟಾ ಸೋರಿಕೆ!

ಭಾರತದಲ್ಲಿ ಈವರೆಗೆ ಕಂಡು ಕೇಳರಿಯದ ಬಹುದೊಡ್ಡ ಡೇಟಾ ಸೋರಿಕೆ ಪ್ರಕರಣ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇಂಡಿಯನ್ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ನ ಬಳಿ ಇದ್ದ 81. 5 ಕೋಟಿ ಭಾರತೀಯರ ವಿವರಗಳು ಮಾರಾಟವಾಗಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು ಐಸಿಎಂಆರ್​ ಈ ಸಂಬಂಧ ದೂರು ದಾಖಲಿಸಿದ ಬಳಿಕ ಸಿಬಿಐ ಈ ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ.

ಎಕ್ಸ್​ ಹ್ಯಾಂಡಲ್​ನಲ್ಲಿ ಡಾರ್ಕ್ ವೆಬ್​ನಲ್ಲಿ ಇದರ ಬಗ್ಗೆ ಸೈಬರ್​ ವಂಚಕ ಮಾಹಿತಿ ಹಂಚಿಕೊಂಡಿದ್ದಾನೆ. ಇದರಲ್ಲಿ 81. 5 ಕೋಟಿ ಭಾರತೀಯರ ವೈಯಕ್ತಿಕ ದಾಖಲೆಗಳು ಇವೆ ಎನ್ನಲಾಗಿದೆ. ಹೆಸರು, ಫೋನ್​ ನಂಬರ್​, ವಿಳಾಸ, ಆಧಾರ್​ ಕಾರ್ಡ್, ಪಾಸ್​ಪೋರ್ಟ್ ಮಾಹಿತಿ ಇದರಲ್ಲಿ ಇದೆ. ಕೋವಿಡ್​ 19 ಪರೀಕ್ಷೆಯ ಸಂದರ್ಭದಲ್ಲಿ ನಾಗರಿಕರಿಂದ ಪಡೆದುಕೊಳ್ಳಲಾಗಿದ್ದ ಮಾಹಿತಿಯನ್ನು ಐಸಿಎಂಆರ್​ನಿಂದ ಪಡೆಯಲಾಗಿದೆ ಎಂದು ಥ್ರೆಟ್​ ಆಕ್ಟರ್​ ಹೇಳಿದ್ದಾರೆ.

ಫೆಬ್ರವರಿಯಿಂದ ಅನೇಕ ಬಾರಿ ಐಸಿಎಂಆರ್​ ಮೇಲೆ ಸೈಬರ್​ ದಾಳಿ ಪ್ರಯತ್ನ ನಡೆಯುತ್ತಲೇ ಇದೆ. ಈ ಬಗ್ಗೆ ಕೇಂದ್ರೀಯ ಏಜೆನ್ಸಿ ಹಾಗೂ ಕೌನ್ಸಿಲ್​ಗೆ ಕೂಡ ಮಾಹಿತಿಯಿತ್ತು. ಐಸಿಎಂಆರ್​ನ ಸರ್ವರ್​ಗಳನ್ನು ಹ್ಯಾಕ್​ ಮಾಡಲು ಕಳೆದೊಂದು ವರ್ಷದಿಂದ ಆರು ಸಾವಿರಕ್ಕೂ ಅಧಿಕ ಬಾರಿ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದಾಖಲೆಗಳನ್ನು ಕಾಪಾಡಿಕೊಳ್ಳಲು ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಐಸಿಎಂಆರ್​ಗೆ ಕೇಂದ್ರೀಯ ಏಜೆನ್ಸಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಸಂಬಂಧ ಇನ್ನೂ ಐಸಿಎಂಆರ್​ನಿಂದ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...