alex Certify BIGG NEWS : 3.26 ಲಕ್ಷ `ರೇಷನ್ ಕಾರ್ಡ್’ ರದ್ದು! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : 3.26 ಲಕ್ಷ `ರೇಷನ್ ಕಾರ್ಡ್’ ರದ್ದು! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿ

ಬೆಂಗಳೂರು : 6 ತಿಂಗಳಿನಿಂದ ಪಡಿತರ ಪಡೆಯದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಒಟ್ಟು 3.26 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ ಎಂದು ವರದಿಯಾಗಿದೆ.

ಕೆಲವರು ಕಳೆದ 6 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂಬುದು ತಿಳಿದು ಬಂದಿದ್ದು, ಇಂತಹವರಿಗೆ ಆಹಾರ ಇಲಾಖೆ ಶಾಕ್ ನೀಡಿದ್ದು, ರೇಷನ್ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ.ಯಾರು ಪ್ರತಿ ತಿಂಗಳು ರೇಷನ್ ಪಡೆಯುದಿಲ್ಲವೋ ಅಂತಹವರ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ.

ಸುಮಾರು 3.26 ಲಕ್ಷ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ .ಈಗಾಗಲೇ ಇ ಕೆವೈಸಿ ಶೇಕಡಾ 96. ರಷ್ಟು ಪೂರ್ಣಗೊಂಡ ಹಿನ್ನೆಲೆ 2.95.986 ಅರ್ಜಿದಾರರು ಅದ್ಯತಾ ಪಡಿತರ ಕಾರ್ಡ್ ಪೈಕಿ ಸುಮಾರು 71.410 ಅರ್ಜಿಗಳು ರೇಷನ್ ಕಾರ್ಡ್ ಗಾಗಿ ಸಾರ್ವಜನಿಕರು ಅರ್ಜಿಯನ್ನು ಸಲ್ಲಿಸಿದ್ದಾರೆ.ಈಗಾಗಲೇ 2.92 ಲಕ್ಷ ಅರ್ಜಿ ಪೂರ್ಣ ಗೊಳ್ಳುವರೆಗೂ ಯಾವುದೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಇರುವುದಿಲ್ಲ.ಈಗಾಗಲೇ APL ಕಾರ್ಡ್ ಗೆ ಸಲ್ಲಿಸಿರುವ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬ ಪಡಿತರವನ್ನೇ ಪಡೆದಿಲ್ಲ, ಈ ವಾರದಲ್ಲಿ 3.26 ಲಕ್ಷ ಕಾರ್ಡ್​ಗಳು ರದ್ದಾಗಲಿವೆ. ರಾಜ್ಯದಲ್ಲಿ ಒಟ್ಟು 52.34 ಲಕ್ಷ ರೇಷನ್‌ ಕಾರ್ಡ್‌ಗಳಿವೆ. 1 ಕೋಟಿ 52 ಲಕ್ಷದಷ್ಟು ಕಾರ್ಡ್​ದಾರರಿದ್ದಾರೆ, BPL-1,27,82,893 ರೇಷನ್‌ ಕಾರ್ಡ್​ಗಳಿವೆ. 4.37 ಕೋಟಿ ಜನರು ರೇಷನ್ ಪಡೆದುಕೊಳ್ಳುತ್ತಿದ್ದಾರೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ವೋ ಈ ರೀತಿ ಚೆಕ್ ಮಾಡಿ

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ವೋ ಅಂತ  ಪರಿಶೀಲಿಸಲು  ಬಯಸಿದರೆ, ಇದಕ್ಕಾಗಿ, ನೀವು ಅದರ ಅಧಿಕೃತ ವೆಬ್ಸೈಟ್ಗೆ ಹೋಗಬೇಕು nfsa.gov.in/Default.aspx

ವೆಬ್ಸೈಟ್ಗೆ ಹೋದ ನಂತರ, ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಬೇಕು

ನಂತರ ನೀವು ‘ರಾಜ್ಯ ಪೋರ್ಟಲ್ಗಳಲ್ಲಿ ಪಡಿತರ ಚೀಟಿ ವಿವರಗಳು’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಪಡಿತರ ಚೀಟಿ ಇರುವ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ

ಇದರ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು ಮತ್ತು ನಂತರ ನಿಮ್ಮ ಬ್ಲಾಕ್ ಅನ್ನು ಸಹ ಆಯ್ಕೆ ಮಾಡಬೇಕು

ನಂತರ ನೀವು ನಿಮ್ಮ ಪಂಚಾಯತ್ ಅನ್ನು ಸಹ ಆಯ್ಕೆ ಮಾಡಬೇಕು

ಈಗ ನೀವು ನಿಮ್ಮ ಪಡಿತರ ಅಂಗಡಿಯ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಸಹ ಹೇಳಬೇಕು

ನಂತರ ಒಂದು ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ

ಈ ಪಟ್ಟಿಯಲ್ಲಿ ಪಡಿತರ ಚೀಟಿದಾರರ ಹೆಸರುಗಳಿವೆ

ಈಗ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಹುಡುಕಬೇಕು

ನಂತರ ಹುಡುಕಿದ ಹೆಸರು ಪಟ್ಟಿಯಲ್ಲಿ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಅಂತ ಅರ್ಥ. ಆದರೆ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಅಂತ ಅರ್ಥ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...