alex Certify ಇಲ್ಲಿದೆ ಹಿಂದಿ ಬಿಗ್ ​ಬಾಸ್​ ಸೀಸನ್-​15ರ ಸ್ಪರ್ಧಿಗಳ ಅಧಿಕೃತ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಹಿಂದಿ ಬಿಗ್ ​ಬಾಸ್​ ಸೀಸನ್-​15ರ ಸ್ಪರ್ಧಿಗಳ ಅಧಿಕೃತ ಪಟ್ಟಿ

ಹಿಂದಿ ವಾಹಿನಿಯ ಬಿಗ್​ಬಾಸ್​​ ಒಟಿಟಿ ಕೆಲ ದಿನಗಳ ಹಿಂದಷ್ಟೇ ಪೂರ್ಣಗೊಂಡಿದೆ. ಹೀಗಾಗಿ ಪ್ರೇಕ್ಷಕರು ಇದೀಗ ಬಿಗ್​ಬಾಸ್​ ಸೀಸನ್​ 15ಕ್ಕೆ ಕಾಯುತ್ತಿದ್ದಾರೆ.

11ನೇ ಬಾರಿಗೆ ಸಲ್ಮಾನ್​ ಖಾನ್​ ಬಿಗ್​ಬಾಸ್​ ಸಾರಥ್ಯ ವಹಿಸಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯು ಕೂಡ ಸ್ಪರ್ಧಿಗಳು ಯಾರ್ಯಾರು ಇರಬಹುದು ಎಂಬ ಚರ್ಚೆ ಜೋರಾಗಿದೆ.

ಬಿಗ್​ಬಾಸ್​ ಒಟಿಟಿ ಫೈನಲ್​ ಸಂದರ್ಭದಲ್ಲಿ ಪ್ರತೀಕ್​ ಸೆಹಜ್​ಪಾಲ್​ ತಾವು ಸೀಸನ್​ 15ರಲ್ಲಿ ಭಾಗಿಯಾಗೋದಾಗಿ ಘೋಷಣೆ ಮಾಡಿದ್ದರು. ಇವರ ಜೊತೆಯಲ್ಲಿ ಇನ್ನೂ ಯಾರ್ಯಾರು ಈ ಶೋನಲ್ಲಿ ಇರ್ತಾರೆ ಎಂಬ ಪಟ್ಟಿ ಇಲ್ಲಿದೆ ನೋಡಿ.

ಉಮರ್​ ರಿಯಾಜ್​

 

ಉಮರ್ ರಿಯಾಜ್​ ಈಗಾಗಲೇ ಬಿಗ್​ಬಾಸ್​​​ ಶೋನಲ್ಲಿ ಕಾಣಿಸಿಕೊಂಡಿರುವ ಆಸಿಮ್​ ರಿಯಾಜ್​ರ ಸಹೋದರನಾಗಿದ್ದಾರೆ. ಇವರು ಮನರಂಜನಾ ಕ್ಷೇತ್ರದಲ್ಲಿ ಕಾಣಿಸಿಕೊಂಡವರಲ್ಲ. ವೃತ್ತಿಯಲ್ಲಿ ವೈದ್ಯನಾಗಿರುವ ಉಮರ್​ ಈ ಬಾರಿಯ ಬಿಗ್​ಬಾಸ್​ನಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇವರು ಟ್ವಿಟರ್​ನಲ್ಲಿ ತಾವು ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

— umar riaz (@realumarriaz) September 23, 2021

ಶಮಿತಾ ಶೆಟ್ಟಿ

ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಬಿಗ್​ಬಾಸ್​ ಒಟಿಟಿಯಲ್ಲಿ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಶಮಿತಾ ತಾವು ಬಿಗ್​ಬಾಸ್​ ಸೀಸನ್​ 15ರಲ್ಲಿ ಕಾಣಿಸಿಕೊಳ್ತಿರುವ ಬಗ್ಗೆ ಕನ್ಫರ್ಮ್​ ಮಾಡಿದ್ದಾರೆ. ಬಿಗ್​ಬಾಸ್​ ಒಟಿಟಿಯಲ್ಲಿ ಶಮಿತಾ ಸೆಕೆಂಡ್​ ರನ್ನರ್​ ಅಪ್​ ಆಗಿದ್ದರು.

ನಿಶಾಂತ್ ಭಟ್​

ಬಿಬಿ ಒಟಿಟಿ ಫೈನಲಿಸ್ಟ್​ ನಿಶಾಂತ್​ ಇದೀಗ ಮತ್ತೊಮ್ಮೆ ದೊಡ್ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿ ವೇಳೆ ಆರತಿ ಸಿಂಗ್​ ಹಾಗೂ ದೆವೋಲಿನಾ ಭಟ್ಟಾಚಾರ್ಜಿ ಈ ವಿಚಾರವನ್ನು ಕನ್ಫರ್ಮ್​ ಮಾಡಿದ್ದರು. ಬಿಗ್​ಬಾಸ್​ ಒಟಿಟಿಯಲ್ಲಿ ಫೇಮಸ್ ಆಗಿದ್ದ ನಿಶಾಂತ್​ 15ನೇ ಸೀಸನ್​ನಲ್ಲಿ ಹೇಗಿರ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಪ್ರತೀಕ್​ ಸೆಹಜ್​ಪಾಲ್​

ಬಿಗ್​ಬಾಸ್​ ಒಟಿಟಿ ಫಿನಾಲೆಯಲ್ಲಿ ಬಿಗ್​ಬಾಸ್​​ ಒಟಿಟಿ ಗೆಲ್ಲುವ ಅವಕಾಶ ಕಳೆದುಕೊಂಡು ಅದರ ಬದಲಾಗಿ ಬಿಗ್​ಬಾಸ್​ ಸೀಸನ್​ 15ಕ್ಕೆ ಪ್ರವೇಶ ಪಡೆಯೋದನ್ನು ಆಯ್ಕೆ ಮಾಡಿಕೊಂಡಿದ್ದರು. ಇವರು ಬಿಗ್​ ಬಾಸ್​ ಸೀಸನ್​ 15ಕ್ಕೆ ಆಯ್ಕೆಯಾದ ಮೊದಲ ಸ್ಪರ್ಧಿಯಾಗಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...