alex Certify BIG NEWS: PSI ಹುದ್ದೆಗೆ ಶಾಸಕರ ವಿರುದ್ಧ ಲಂಚ ಆರೋಪ; “ಅದು ಹಣ ಅಲ್ಲ ಹಣ್ಣು” ಉಲ್ಟಾ ಹೊಡೆದ ಪರಸಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: PSI ಹುದ್ದೆಗೆ ಶಾಸಕರ ವಿರುದ್ಧ ಲಂಚ ಆರೋಪ; “ಅದು ಹಣ ಅಲ್ಲ ಹಣ್ಣು” ಉಲ್ಟಾ ಹೊಡೆದ ಪರಸಪ್ಪ

ಬೆಂಗಳೂರು: ಪಿ ಎಸ್ ಐ ನೇಮಕಾತಿಗಾಗಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರು ಲಂಚ ಪಡೆದ ಆರೋಪಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಹಣ ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದ ಪರಸಪ್ಪ ಇದೀಗ ಉಲ್ಟಾ ಹೊಡೆದಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಸಪ್ಪ, ಶಾಸಕ ದಡೇಸೂಗೂರು ನಮ್ಮ ಕುಲಬಾಂಧವರು. ಶಾಸಕರ ಸಂಬಂಧಿ ಜೊತೆಗೆ ಜಮೀನು ವ್ಯವಹಾರವಿತ್ತು. ವ್ಯವಹಾರದ ಬಗ್ಗೆ ಮಾತನಾಡಲು ಶಾಸಕರ ಬಳಿ ಹೋಗಿದ್ವಿ. ದುಡ್ಡು ಸಂದಾಯದ ಬಗ್ಗೆ ಶಾಸಕರ ಬಳಿ ಮಾತನಾಡಿದ್ವಿ. ಈಗ ಆಡೀಯೋ, ವಿಡಿಯೋವನ್ನು ತಿರುಚಿ ಶಾಸಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇದರಲ್ಲಿ ಶಾಸಕರ ಪಾತ್ರ ಏನೂ ಇಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.

ಅಂದು ಹಣ್ಣು ಇದ್ದ ಬ್ಯಾಗ್ ಕೊಟ್ಟು ಫೋಟೋ ತೆಗೆಸಿಕೊಂಡ್ವಿ. ಈಗ ಆ ಫೋಟೋವನ್ನು ತಿರುಚಿ ಲಂಚ ಕೊಟ್ಟಿದ್ದು ಎಂದು ಆರೋಪ ಮಾಡಿ ನಮ್ಮ ತೇಜೋವಧೆ ಮಾಡಲಾಗುತ್ತಿದೆ. ಮಾನನಷ್ಟವಾದರೆ ಕಮಿಷ್ನರ್ ಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಮಗನ ಪಿ ಎಸ್ ಐ ಹುದ್ದೆಗಾಗಿ ಶಾಸಕರಿಗೆ ಲಂಚ ಕೊಟ್ಟಿದ್ದೇನೆ ಎಂದು ಹೇಳಿದ್ದ ಪರಸಪ್ಪ ಈಗ ಶಾಸಕರ ಪರ ಬ್ಯಾಟ್ ಬೀಸಿದ್ದು, ತಾನು ಲಂಚ ಕೊಟ್ಟಿಲ್ಲ ಎಂದು ತಿರುಗಿ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...