alex Certify BIG NEWS: LPG ಸಿಲಿಂಡರ್‌ಗಳಿಗೂ ಬರಲಿದೆ QR ಕೋಡ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: LPG ಸಿಲಿಂಡರ್‌ಗಳಿಗೂ ಬರಲಿದೆ QR ಕೋಡ್‌

ಎಲ್‌ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್ ಕೋಡ್‌ಗಳೊಂದಿಗೆ ಬರಲಿವೆ. ದೇಶೀಯ ಸಿಲಿಂಡರ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಕೋಡ್-ಆಧಾರಿತ ಟ್ರ್ಯಾಕಿಂಗ್‌ ಮತ್ತು ಟ್ರೇಸ್ ಉಪಕ್ರಮವು ಸಿಲಿಂಡರ್‌ ಕಳವನ್ನು ತಡೆಯಲು ನೆರವಾಗಲಿದೆ. ಜೊತೆಗೆ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಯನ್ನು ಪತ್ತೆಹಚ್ಚಲು ಮತ್ತು ಖಚಿತಪಡಿಸಿಕೊಳ್ಳಲು ಕೂಡ ಅನುಕೂಲ ಮಾಡಿಕೊಡಲಿದೆ.

ಕ್ಯೂಆರ್ ಕೋಡ್ ಅನ್ನು ಅಸ್ತಿತ್ವದಲ್ಲಿರುವ ಸಿಲಿಂಡರ್‌ಗಳಲ್ಲಿ ಅಂಟಿಸಲಾಗುವುದು ಮತ್ತು ಹೊಸದಕ್ಕೆ ಕೂಡ ಬೆಸುಗೆ ಹಾಕಲಾಗುತ್ತದೆ. ಕ್ಯೂಆರ್‌ ಕೋಡ್‌ ಸಕ್ರಿಯಗೊಳಿಸಿದಾಗ ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ದಾಸ್ತಾನು ನಿರ್ವಹಣೆ ಹೀಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿದೆ ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದಲ್ಲಿ ಸಚಿವರು ಈ ಕುರಿತಂತೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲ ಬ್ಯಾಚ್‌ನ 20,000 ಎಲ್‌ಪಿಜಿ ಸಿಲಿಂಡರ್‌ಗಳಿಗೆ ಈಗಾಗ್ಲೇ ಕ್ಯೂಆರ್‌ ಕೋಡ್‌ಗಳನ್ನು ನೀಡಲಾಗಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಎಲ್ಲಾ 14.2 ಕೆಜಿ ದೇಶೀಯ ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಂಟಿಸಲಾಗುತ್ತದೆ. ಇದು ಸಿಲಿಂಡರ್ ಗೆ ಭದ್ರತೆಯನ್ನು ಒದಗಿಸಲಿದೆ. ಸಿಲಿಂಡರ್‌ಗಳ ಸುರಕ್ಷತಾ ಪರೀಕ್ಷೆಗಳ ಕುರಿತು ಮಾಹಿತಿ ಕೂಡ ಇದರಲ್ಲಿ ಲಭ್ಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...