alex Certify BIG NEWS : ʻKSRTCʼ ಅಪಘಾತ ಪರಿಹಾರ 10 ಲಕ್ಷ ರೂ.ಗೆ ಹೆಚ್ಚಳ : ಜನವರಿ 1 ರಿಂದ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ʻKSRTCʼ ಅಪಘಾತ ಪರಿಹಾರ 10 ಲಕ್ಷ ರೂ.ಗೆ ಹೆಚ್ಚಳ : ಜನವರಿ 1 ರಿಂದ ಜಾರಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಪರಿಹಾರ ಮೊತ್ತವನ್ನು ₹ 3 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

₹ 49ಕ್ಕಿಂತ ಕಡಿಮೆ ಮುಖಬೆಲೆಯ ಟಿಕೆಟ್‌ಗೆ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಇರುವುದಿಲ್ಲ. ₹ 50ರಿಂದ ₹ 100ರ ವರೆಗಿನ ಮುಖ ಬೆಲೆ ಟಿಕೆಟ್‌ಗೆ ₹ 1 ಹಾಗೂ ₹ 100ಕ್ಕಿಂತ ಹೆಚ್ಚು ಮುಖ ಬೆಲೆ ಟಿಕೆಟ್‌ಗೆ ₹ 2 ಅಪಘಾತ ಪರಿಹಾರ ನಿಧಿ ವಂತಿಕೆಯಾಗಿ ಸಂಗ್ರಹಿಸಲಾಗುತ್ತದೆ.

ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ:01.03.2017 ರಿಂದ ಪಾವತಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನು ದಿನಾಂಕ 31.10.2023 ರಂದು ಜರುಗಿದ 29ನೇ ಅಪಘಾತ ಪರಿಹಾರ ನಿಧಿ ಸಭೆಯಲ್ಲಿ 3,00,000 ರೂ.ದಿಂದ  10 ಲಕ್ಷಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...