alex Certify BIG NEWS: KPTCL ಅಕ್ರಮ; ಮತ್ತೆ 6 ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: KPTCL ಅಕ್ರಮ; ಮತ್ತೆ 6 ಆರೋಪಿಗಳು ಅರೆಸ್ಟ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಗೋಕಾಕ್ ಪೊಲಿಸರು ಮತ್ತೆ 6 ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಾನಂದ ರಾಮಪ್ಪ ಕಾಮೋಜಿ (22), ಬಟಕುರ್ಕಿಯ ಆದಿಲ್‌ಶಾ ಸಿಕಂದರ ತಾಸೇವಾಲೆ (23), ಈರಣ್ಣ ಮಲ್ಲಪ್ಪ ಬಂಕಾಪುರ (26), ಮಹಾಂತೇಶ ಹಣಮಂತ ಹೊಸುಪ್ಪಾರ (22), ಮಹಾಲಿಂಗಪ್ಪ ಭೀಮಪ್ಪ ಕುರಿ (30) ಹಾಗೂ ಸುಂದರ ಶಿವಾನಂದ ಬಾಳಿಕಾಯಿ (23) ಬಂಧಿತ ಆರೋಪಿಗಳು.

ಇವರು ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು ಎನ್ನಲಾಗಿದೆ. ಈ ಮೂಲಕ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಅವರಲ್ಲಿ ಎರಡು ದಿನಗಳ ಹಿಂದೆ 20 ಆರೋಪಿಗಳಿಗೆ ಗೋಕಾಕ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...