alex Certify BIG NEWS : ‘KEA’ ನೇಮಕಾತಿ ಪರೀಕ್ಷೆ ಅಕ್ರಮದ ಕೇಸ್ ‘CID’ ಗೆ ಹಸ್ತಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘KEA’ ನೇಮಕಾತಿ ಪರೀಕ್ಷೆ ಅಕ್ರಮದ ಕೇಸ್ ‘CID’ ಗೆ ಹಸ್ತಾಂತರ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಕರಣ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಸಿಐಡಿ DySP ಶಂಕರಗೌಡ ಪಾಟೀಲ್, DySP ತನ್ವೀರ್ಗೆ ಹಸ್ತಾಂತರಿಸಿ ಪಿಐ ಅರುಣ ತನಿಖೆಯ ಮಾಹಿತಿ ವಿವರಿಸಿದ್ದಾರೆ. ಸಿಐಡಿ SP ರಾಘವೇಂದ್ರ ಹೆಗಡೆ ಇಂದು ಕಲಬುರಗಿಗೆ ಆಗಮಿಸಲಿದ್ದಾರೆ. ಎಸ್ಪಿ ಆಗಮಿಸಿದ ನಂತರ ತನಿಖೆಯ ಹೊಣೆಗಾರಿಕೆ ಹಂಚಿಕೆ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕೆಇಎ ಪರೀಕ್ಷಾ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮದ ಕಿಂಗ್ಪಿನ್ ಆರ್.ಡಿ. ಪಾಟೀಲ್ ಬಂಧನವಾದ ಬೆನ್ನಲ್ಲೇ ಗೃಹ ಇಲಾಖೆ ಸೂಚನೆ ಮೇರೆಗೆ ಪ್ರಕರಣದ ತನಿಖೆ ಹೊಣೆಯನ್ನು ಸಿಐಡಿಗೆ ನೀಡಲಾಗಿದೆ.

ಅಕ್ಟೋಬರ್ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ನಿಗಮ ಮತ್ತು ಮಂಡಳಿ ನೇಮಕಾತಿ ಪರೀಕ್ಷೆಯ ವೇಳೆ ಕೆಲ ಅಭ್ಯರ್ಥಿಗಳು ಬ್ಲೂ ಟೂತ್ ಬಳಸಿ ಸಿಕ್ಕಿಬಿದ್ದಿದ್ದರು. ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...