alex Certify BIG NEWS: DCP ಕಾರಿನಲ್ಲಿದ್ದ ಡಿಎಸ್ ಸಿ ಕೀ ಕಳ್ಳತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: DCP ಕಾರಿನಲ್ಲಿದ್ದ ಡಿಎಸ್ ಸಿ ಕೀ ಕಳ್ಳತನ

ಬೆಂಗಳೂರು: ಸಂಚಾರಿ ವಿಭಾಗದ ಡಿಸಿಪಿ ಡಾ.ಸುಮನ್ ಪನ್ನೇಕರಚ ಅವರ ಕಾರಿನಲ್ಲಿದ್ದ ಡಿಎಸ್ ಸಿ ಕೀ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಡಾ.ಸುಮನ್ ಪನ್ನೇಕರಚ ಅವರ ಕಾರಿನಲ್ಲಿದ್ದ ಇ ತಂತ್ರಾಂಶದ ಸಹಿಗೆ ಬಳಸುವ ಡಿಎಸ್ ಸಿ ಕೀ ಕಳ್ಳತನವಾಗಿದೆ.

ಡಿಸಿಪಿ ಡಾ.ಸುಮನ್, ಖಾಸಗಿ ಕಾರಿನಲ್ಲಿ ಬಿಬಿಎಂಪಿ ಕಚೇರಿ ಬಳಿ ಬಂದಿದ್ದರು. ಕೀಯನ್ನು ಕಾರಿನ ಸೀಟ್ ಮೇಲೆ ಬಿಟ್ಟಿದ್ದರು. ಕಾರನ್ನು ಲಾಕ್ ಮಾಡಲು ಮರೆತು ಕಚೇರಿಗೆ ತೆರಳಿದ್ದಾರೆ. ಈ ವೇಳೆ ಕಳ್ಳರು ಕೀ ಕದ್ದು ಎಸ್ಕೇಪ್ ಆಗಿದ್ದಾರೆ. ಡಿಸಿಪಿಯವರು ಕಾರಿನ ಬಳಿ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...