alex Certify BIG NEWS: ಬಿಜೆಪಿ ಮುಖಂಡ K.N. ಚಕ್ರಪಾಣಿ ವಿರುದ್ಧ FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಮುಖಂಡ K.N. ಚಕ್ರಪಾಣಿ ವಿರುದ್ಧ FIR ದಾಖಲು

ಬೆಂಗಳೂರು: ಹಲ್ಲೆ, ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಕೆ.ಎನ್. ಚಕ್ರಪಾಣಿ ವಿರುದ್ಧ ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಶ್ರೀಧರಮೂರ್ತಿ ಎಂಬುವವರ ಮೇಲೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣ ಹಿನ್ನೆಲೆಯಲ್ಲಿ ಶ್ರೀಧರಮೂರ್ತಿ ಎಂಬುವವರು ಚಕ್ರಪಾಣಿ ವಿರುದ್ಧ ಕೋಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಡಿಗೆಹಳ್ಳಿಯ ವಿರುಪಾಕ್ಷಪುರದಲ್ಲಿ ಚಕ್ರಪಾಣಿ ಮನೆ ಬಳಿ ಶ್ರೀಧರಮೂರ್ತಿ ಅಪಾರ್ಟ್ ಮೆಂಟ್ ರಿಪೇರಿ ಕೆಲಸ ಮಾಡುತ್ತಿದ್ದರು. ಈ ವೇಳೆ 12 ಜನರ ಗುಂಪಿನೊಂದಿಗೆ ಬಂದ ಚಕ್ರಪಾಣಿ, ಶ್ರೀಧರಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯಶಬ್ದಗಳಿಂದ ನಿಂದಿಸಿ, ಮನೆ ಮುಂದೆ ನಿಲ್ಲಬೇಡ, ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಚಕ್ರಪಾಣಿ ವಿರುದ್ಧ ಶ್ರೀಧರಮೂರ್ತಿ ದೂರು ನೀಡಿದ್ದು, ಬಿಜೆಪಿ ಮುಖಂಡನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...