alex Certify BIG NEWS : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್!

ಪ್ರಸ್ತುತ ದೇಶದಾದ್ಯಂತ ಹಣದುಬ್ಬರವು ವೇಗವಾಗಿ ಹೆಚ್ಚುತ್ತಿದೆ. ಟೊಮೆಟೊದಿಂದ ಹಿಡಿದು ಬೇಳೆಕಾಳುಗಳವರೆಗೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಮಧ್ಯೆ  ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ತರಕಾರಿ ಬೆಲೆಗಳು ಗಗನಕ್ಕೇರಿರುವುದರಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಶೇ.6ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಪಾನಿನ ಬ್ರೋಕರೇಜ್ ಸಂಸ್ಥೆ ನೊಮುರಾ ಹೇಳಿದೆ.

ಹಣದುಬ್ಬರ RBI ಮಟ್ಟಕ್ಕಿಂತ ಹೆಚ್ಚಿರುತ್ತದೆ

ವರದಿಯಲ್ಲಿ ಹೇಳಿದಂತೆಯೇ ಸಂಭವಿಸಿದಲ್ಲಿ ಇದು ರಿಸರ್ವ್ ಬ್ಯಾಂಕ್‌ನ ತೃಪ್ತಿದಾಯಕ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2 ರಿಂದ 4 ರ ವ್ಯಾಪ್ತಿಯಲ್ಲಿ ಇರಿಸುವ ಜವಾಬ್ದಾರಿಯನ್ನು ಸರ್ಕಾರವು ರಿಸರ್ವ್ ಬ್ಯಾಂಕ್‌ಗೆ ವಹಿಸಿದೆ. ತರಕಾರಿಗಳ ಬೆಲೆ ಏರಿಕೆಯ ಬಗ್ಗೆ ಅರಿವಿರುವ ಸರ್ಕಾರವು ಆಹಾರ ಉತ್ಪನ್ನಗಳ ಪೂರೈಕೆಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗ್ತಿದೆ.

ಈಗಾಗ್ಲೇ ಸರ್ಕಾರ ಬಾಸ್ಮತಿ ಹೊರತಾದ ಬಿಳಿ ಅಕ್ಕಿ ರಫ್ತು ನಿಷೇಧಿಸಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚಾಗಬಹುದು. ಇದರ ಹಿಂದೆ ತರಕಾರಿ ಬೆಲೆ ಏರಿಕೆ ಪ್ರಮುಖ ಪಾತ್ರ ವಹಿಸಲಿದೆ. ಆದಾಗ್ಯೂ ಪೂರೈಕೆಯನ್ನು ಸುಧಾರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ವರ್ಷಾಂತ್ಯದಲ್ಲಿ ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ರಾಜಕೀಯ ಆದ್ಯತೆ. ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ಶೇ 4.81ಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ಶೇ 4.31ರಷ್ಟಿತ್ತು. ಇದಕ್ಕೆ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಕಾರಣ ಎಂದು ಹೇಳಲಾಗಿದೆ.

ರೆಪೋ ದರಗಳು ಏರಿಕೆಯಾಗಿಲ್ಲ! ಕಳೆದ ವರ್ಷ ಚಿಲ್ಲರೆ ಹಣದುಬ್ಬರವು ಹೆಚ್ಚಿನ ಮಟ್ಟಕ್ಕೆ ತಲುಪಿದ ನಂತರ ರಿಸರ್ವ್ ಬ್ಯಾಂಕ್ ಪಾಲಿಸಿ ರೆಪೊ ದರವನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ನಿವಾರಿಸುವ ತಂತ್ರವನ್ನು ಅಳವಡಿಸಿಕೊಂಡಿದೆ. ರೆಪೋ ದರವನ್ನು ಸತತವಾಗಿ ಹಲವಾರು ಬಾರಿ ಹೆಚ್ಚಿಸಲಾಯಿತು ಮತ್ತು ಅದು ಶೇಕಡಾ 4 ರಿಂದ 6.50 ಕ್ಕೆ ಏರಿತು. ಆದಾಗ್ಯೂ, ಕಳೆದ ಎರಡು ದ್ವೈಮಾಸಿಕ ಪರಿಶೀಲನಾ ಸಭೆಗಳಲ್ಲಿ ರೆಪೊ ದರವನ್ನು ಸ್ಥಿರವಾಗಿ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...