alex Certify Big News: ಹೃತಿಕ್ ರೋಷನ್ ಮಾಜಿ ಪತ್ನಿಗೆ ಒಮಿಕ್ರೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಹೃತಿಕ್ ರೋಷನ್ ಮಾಜಿ ಪತ್ನಿಗೆ ಒಮಿಕ್ರೋನ್

Sussanne Khan tests Omicron positive, rumoured BF Arslan Goni REACTS!

ಬಾಲಿವುಡ್ ಸೂಪರ್ ಸ್ಟಾರ್​ ಹೃತಿಕ್​ ರೋಷನ್​ ಮಾಜಿ ಪತ್ನಿ ಖ್ಯಾತ ಇಂಟಿರೀಯರ್​ ಡಿಸೈನರ್​ ಸುಸೇನ್​ ಖಾನ್​​ರಿಗೆ ಹೊಸ ಕೊರೊನಾ ರೂಪಾಂತರಿ ಓಮಿಕ್ರಾನ್​ ಧೃಡಪಟ್ಟಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸುಸೇನ್​ ಖಾನ್​ ಮಾಹಿತಿ ಹಂಚಿಕೊಂಡಿದ್ದಾರೆ.

ಕೋವಿಡ್​ 19 ಆರಂಭವಾಗಿ 2 ವರ್ಷಗಳ ಬಳಿಕ, 2022ರಲ್ಲಿ ಮೂರನೇ ಅಲೆಯು ಬಂದ ಬಳಿಕ ಈ ಮೊಂಡು ಓಮಿಕ್ರಾನ್​ ರೂಪಾಂತರಿಯು ಕೊನೆಗೂ ನನ್ನ ರೋಗನಿರೋಧಕ ಶಕ್ತಿಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ನನಗೆ ನಿನ್ನೆ ರಾತ್ರಿ ಕೊರೊನಾ ಪಾಸಿಟಿವ್​ ವರದಿ ಬಂದಿದೆ. ದಯವಿಟ್ಟು ಸುರಕ್ಷಿತವಾಗಿರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಬರೆದುಕೊಂಡಿದ್ದಾರೆ.

ಸುಸೇನ್​ ಖಾನ್​ರ ಈ ಪೋಸ್ಟ್​​ಗೆ ನಟ ಟೈಗರ್​ ಶ್ರಾಫ್​, ರಿಧಿಮಾ ಕಪೂರ್​, ಸೋಫಿ ಚೌಧರಿ, ಭಾವನಾ ಪಾಂಡೆ, ದಬ್ಬೂ ರತ್ನಾನಿ, ಅಲಿ ಗೂನಿ ಸೇರಿದಂತೆ ಅನೇಕರು ಶೀಘ್ರವೇ ಹುಷಾರಾಗಿ ಎಂದು ಕಮೆಂಟ್​ ಮಾಡಿದ್ದಾರೆ. ಆದರೆ ಇದರಲ್ಲೂ ಸುಸೇನ್​ ಖಾನ್​ರ ಬಾಯ್​ಫ್ರೆಂಡ್​ ಎನ್ನಲಾದ ಅಸ್ರ್ಲಾನ್​​ ಗೋನಿ ಕಮೆಂಟ್​ ಎಲ್ಲರ ಸೆಳೆದಿದೆ. ಗೋನಿ ನೀನು ಬೇಗನೇ ಹುಷಾರಾಗುತ್ತೀಯಾ ಎಂದು ಕಮೆಂಟ್​ ಮಾಡಿದರೆ ಇದಕ್ಕೆ ಸುಸೇನ್​ ಹೌದು. ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.

https://www.instagram.com/p/CYk3A9MIoxQ/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...