alex Certify BIG NEWS: ಹವಾಮಾನ ನಿಯಂತ್ರಣದ ಗುರಿಯನ್ನು ಅವಧಿಗೂ ಮುನ್ನವೇ ಸಾಧಿಸಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹವಾಮಾನ ನಿಯಂತ್ರಣದ ಗುರಿಯನ್ನು ಅವಧಿಗೂ ಮುನ್ನವೇ ಸಾಧಿಸಿದ ಭಾರತ

‘ಸೆಟ್ಟಿಂಗ್ ದಿ ಪೇಸ್’ ಎಂಬ ವಿಷಯದ ಮೇಲೆ ಆಯೋಜಿಸಲಾದ ಇಂಡಿಯಾ ಗ್ಲೋಬಲ್ ಫೋರಮ್ (IGF)ನ ವಾರ್ಷಿಕ ಶೃಂಗಸಭೆಯು ಅರ್ಥಪೂರ್ಣ ಭಾಷಣಕ್ಕೆ ಸಾಕ್ಷಿಯಾಯಿತು. ಕೇಂದ್ರ ಸಚಿವ ಭೂಪೇಂದರ್ ಯಾದವ್ ಮಾತನಾಡಿ, ಪರಿಸರವನ್ನು ಸಂರಕ್ಷಿಸಲು ಜಾಗೃತ ಮತ್ತು ಉದ್ದೇಶಪೂರ್ವಕ ಕ್ರಮದ ಅಗತ್ಯತೆಯನ್ನು ವಿವರಿಸಿದ್ರು. ಅರಣ್ಯ ಮತ್ತು ಪರಿಸರ ರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.  ʼರಿಫ್ಲೆಕ್ಷನ್ಸ್ ಆನ್ ಲೈಫ್ʼ ಎಂಬ ಶೀರ್ಷಿಕೆಯಡಿ ಭೂಪೇಂದರ್‌ ಯಾದವ್‌ ಮಾತನಾಡಿದ್ರು.

“ಭಾರತವು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (NDCs) ಸಾಧಿಸಿದೆ, ಸಮಯಕ್ಕಿಂತ ಒಂಬತ್ತು ವರ್ಷಗಳ ಮುಂಚಿತವಾಗಿಯೇ ಇದನ್ನು ಅಭಿವೃದ್ಧಿಪಡಿಸಿದೆ. 2015 ರ ಬದ್ಧತೆಗಳ ಪ್ರಕಾರ 2021 ರಲ್ಲಿ 165 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಈಗಾಗ್ಲೇ ಸಾಧಿಸಿದ್ದೇವೆ ಮತ್ತು ನಮ್ಮ ವರ್ಧಿತ NDC ಗಳನ್ನು ಸಲ್ಲಿಸಿದ್ದೇವೆ.”ಭಾರತವು ನವೀಕರಿಸಬಹುದಾದ ವಲಯದಲ್ಲಿ ಹೂಡಿಕೆ ಮಾಡಿದೆ ಮತ್ತು ನವೀಕರಿಸಬಹುದಾದ ನಮ್ಮ ಸಾಮರ್ಥ್ಯವು ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ದರದಲ್ಲಿದೆ. ಜೀವವೈವಿಧ್ಯವನ್ನು ಸಂರಕ್ಷಿಸಲು ನಾವು 30 ಪ್ರತಿಶತದಷ್ಟು ಭೂಮಿ ಮತ್ತು ಸಮುದ್ರ ಪ್ರದೇಶಗಳನ್ನು ಕಾಯ್ದಿರಿಸಲು ಒಪ್ಪಿಕೊಂಡಿದ್ದೇವೆ ಮತ್ತು 16 ಪ್ರದೇಶಗಳನ್ನು ಜೈವಿಕ ವೈವಿಧ್ಯತೆಯ ಹಾಟ್‌ಸ್ಪಾಟ್‌ಗಳಾಗಿ ಘೋಷಿಸಿದ್ದೇವೆ. ಹವಾಮಾನ ಬದಲಾವಣೆಯ ವಿಷಯಕ್ಕೆ ಬಂದಾಗ, ನಾವು ಸಮಸ್ಯೆಯ ಭಾಗವಾಗಿರದೆ ಪರಿಹಾರದ ಭಾಗವಾಗಿರಲು ಬಯಸುತ್ತೇವೆʼʼ ಎಂದು ಸಚಿವರು ಹೇಳಿದ್ರು.

ಸಚಿವರು ಮಿಷನ್ ಲೈಫ್ ಕುರಿತು ಒಳನೋಟಗಳನ್ನು ಹಂಚಿಕೊಂಡರು, “ಬುದ್ಧಿಯಿಲ್ಲದ ಬಳಕೆಗಿಂತ ಬುದ್ದಿವಂತಿಕೆಯ ಬಳಕೆಯನ್ನು” ಉತ್ತೇಜಿಸುವ ಗುರಿಯನ್ನು ದೇಶ ಹೊಂದಿದೆ. ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವುದರೊಂದಿಗೆ ಕೈಗಾರಿಕೀಕರಣವನ್ನು ಸಮತೋಲನಗೊಳಿಸುವುದು ನಮ್ಮ ಉದ್ದೇಶ ಎಂದರು. ಇಂಗಾಲದ ಕ್ರೆಡಿಟ್ ಮಾರುಕಟ್ಟೆಗಳಿಗೆ ಸಂಬಂಧಿಸಿದ ಆರ್ಟಿಕಲ್ 6 ಕುರಿತು ಮಾತನಾಡಿದರು.

100 ಬಿಲಿಯನ್‌ ಡಾಲರ್‌ ಹವಾಮಾನ ಹಣಕಾಸು ನಿಧಿ ಮತ್ತು ಸಂಬಂಧಿತ ತಂತ್ರಜ್ಞಾನ ವರ್ಗಾವಣೆಯ ಕಡೆಗೆ ತಮ್ಮ ಬದ್ಧತೆಗಳನ್ನು ಪೂರೈಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಅವರು ಕರೆ ಕೊಟ್ಟಿದ್ದಾರೆ.  ವಿಶ್ವ ವೇದಿಕೆಯಲ್ಲಿ ಭಾರತದ ಪ್ರಗತಿಯ ಹಿನ್ನೆಲೆಯಲ್ಲಿ IGF ನ ಪ್ರಮುಖ ಶೃಂಗಸಭೆಯು ಉದ್ದಿಮೆದಾರರು, ನೀತಿ ನಿರೂಪಕರು, ಸಂಸ್ಥಾಪಕರು ಮತ್ತು ಹೂಡಿಕೆದಾರರ ವಿಷಯ ಮಂಡನೆಗೆ ಅವಕಾಶ ಮಾಡಿಕೊಟ್ಟಿತ್ತು.

ವಾರ್ಷಿಕ ಶೃಂಗಸಭೆಯಲ್ಲಿ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದ ಇಂಡಿಯಾ ಗ್ಲೋಬಲ್ ಫೋರಂನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಪ್ರೊ. ಮನೋಜ್ ಲಾಡ್ವಾ, “ಹವಾಮಾನ ತಂತ್ರಜ್ಞಾನ ಆವಿಷ್ಕಾರದಲ್ಲಿ ಭಾರತದ ಹೆಚ್ಚುತ್ತಿರುವ ನಾಯಕತ್ವ ಹರ್ಷದಾಯಕವಾಗಿದೆ ಮತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸಲು ದೇಶದ ಬದ್ಧತೆಗೆ ಇದು ಪ್ರಬಲ ಸಾಕ್ಷಿಯಾಗಿದೆ”ಎಂದರು. ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ, ಕ್ಲೀನ್ ಟೆಕ್ ಕಂಪನಿಗಳು ಪರಿಣಾಮಕಾರಿ ಜಾಗತಿಕ ಪಾಲುದಾರಿಕೆಗಳನ್ನು ರೂಪಿಸಲು ಬೆಂಬಲ ಸಿಗಲಿದೆ ಎಂದರು.

30 ಥೀಮ್‌ಗಳು, 35 ಕ್ಕೂ ಹೆಚ್ಚು ಏಕಕಾಲೀನ ರೌಂಡ್‌ಟೇಬಲ್‌ ಸಂವಾದ, 500 ಕ್ಕೂ ಹೆಚ್ಚು ಜನರ ಪಾಳ್ಗೊಳ್ಳುವಿಕೆಗೆ ಈ ಶೃಂಗಸಭೆ ಸಾಕ್ಷಿಯಾಗಿದೆ. ಜಾಗತಿಕ ಆರ್ಥಿಕತೆಗೆ ಭಾರತವು ಹೇಗೆ “ಗತಿಯನ್ನು ಹೊಂದಿಸುತ್ತಿದೆ” ಎಂಬುದರ ಕುರಿತು ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆ, ಹೂಡಿಕೆ, ಹಣಕಾಸು ಮತ್ತು ಮೂಲಸೌಕರ್ಯದಿಂದ ವೈವಿಧ್ಯತೆ ಎಲ್ಲಾ ಕ್ಷೇತ್ರಗಳ ಆಳ ಅಗಲಗಳ ಬಗ್ಗೆ ವಿಸ್ತ್ರತ ಚರ್ಚೆಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...