alex Certify BIG NEWS: ಸದನದಲ್ಲಿ ಪದೇ ಪದೇ ರಿಂಗಣಿಸಿದ ಫೋನ್; ಮೊಬೈಲ್ ತರದಂತೆ ಸದಸ್ಯರಿಗೆ ಸಭಾಪತಿ ತಾಕೀತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸದನದಲ್ಲಿ ಪದೇ ಪದೇ ರಿಂಗಣಿಸಿದ ಫೋನ್; ಮೊಬೈಲ್ ತರದಂತೆ ಸದಸ್ಯರಿಗೆ ಸಭಾಪತಿ ತಾಕೀತು

ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಪದೇ ಪದೇ ಸದಸ್ಯರ ಫೋನ್ ರಿಂಗ್ ಆಗಿದೆ. ಇದರಿಂದ ಗರಂ ಆದ ಸಭಾಪತಿ ಸದಸ್ಯರಿಗೆ ತಾಕೀತು ಮಾಡಿದ ಪ್ರಸಂಗ ನಡೆದಿದೆ.

ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದಸ್ಯರ ಮೊಬೈಲ್ ಗಳು ಪದೇ ಪದೇ ರಿಂಗ್ ಆಗಿವೆ. ಪರಿಷತ್ ಸಭಾಪತಿ ಮಲ್ಕಾಪೂರೆ, ಸದನದ ಒಳಗೆ ಸದಸ್ಯರು ಫೋನ್ ತರುವಂತಿಲ್ಲ. ಈ ಬಗ್ಗೆ ಈ ಹಿಂದೆಯೇ ಸೂಚಿಸಲಾಗಿದೆ ಎಂದು ಗರಂ ಆದರು.

ಅಧಿವೇಶನದ ವೇಳೆ ಸದನಕ್ಕೆ ಸದಸ್ಯರಿಗೆ ಮೊಬೈಲ್ ಫೋನ್ ನಿಷೇಧ ಮಾಡಿ ಈ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಹೀಗಿರುವಾಗ ಸದಸ್ಯರು ಯಾಕೆ ಫೋನ್ ತೆಗೆದುಕೊಂಡು ಬಂದಿದ್ದೀರಾ ? ಯಾರೂ ಸದನಕ್ಕೆ ಮೊಬೈಲ್ ತರುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...