alex Certify BIG NEWS: ಸಚಿವ – ಸಂಸದರ ವಾಹನ ಖರೀದಿ ಮೊತ್ತ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ – ಸಂಸದರ ವಾಹನ ಖರೀದಿ ಮೊತ್ತ ಹೆಚ್ಚಳ

ರಾಜ್ಯ ಸರ್ಕಾರ, ಸಚಿವರು – ಸಂಸದರು, ಹಿರಿಯ ಅಧಿಕಾರಿಗಳ ವಾಹನ ಖರೀದಿ ಮೊತ್ತವನ್ನು ಹೆಚ್ಚಳ ಮಾಡಿ ಆದೇಶಿಸಿದ್ದು ವಾಹನಗಳ ಬೆಲೆಯಲ್ಲಿ ಏರಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಸಚಿವ – ಸಂಸದರ ಉಪಯೋಗಕ್ಕಾಗಿ ಖರೀದಿಸುವ ವಾಹನಗಳ ಆರ್ಥಿಕ ಮಿತಿಯನ್ನು 23 ಲಕ್ಷ ರೂಪಾಯಿಗಳಿಂದ 26 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಶ್ರೇಣಿಯ ಇಲಾಖಾ ಮುಖ್ಯಸ್ಥರಿಗೆ ವಾಹನ ಖರೀದಿ ಮೊತ್ತ 14 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಇನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ವಾಹನ ಖರೀದಿ ಮೊತ್ತದ ಮಿತಿಯನ್ನು 9 ಲಕ್ಷ ರೂಪಾಯಿಗಳಿಂದ 18 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...