alex Certify BIG NEWS: ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ ‘ಟಿಟಿಡಿ’ ಯಿಂದ 1.5 ಕೋಟಿ ರೂ. ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ ‘ಟಿಟಿಡಿ’ ಯಿಂದ 1.5 ಕೋಟಿ ರೂ. ನಿಗದಿ

ದೇಶದ ಅತ್ಯಂತ ಸಿರಿವಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಆಗಮಿಸುತ್ತಾರೆ. ಇದೀಗ ತಿರುಮಲ ತಿರುಪತಿ ದೇವಸ್ಥಾನಂ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ‘ಉದಯಾಸ್ತಮಾನ’ ಸೇವೆ ಟಿಕೆಟ್ ಗಳ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಅಭಿಷೇಕ ಸೇರಿದಂತೆ ಹಲವು ಸೇವೆಗಳು ಒಳಗೊಂಡಿದೆ ಎಂದು ಹೇಳಲಾಗಿದೆ.

ಈ ಟಿಕೆಟ್ ಪಡೆದ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನು ವೀಕ್ಷಿಸಲು ಜೊತೆಗೆ ಗರ್ಭಗುಡಿ ಸೇರಿದಂತೆ ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆ.

ಈ ಟಿಕೆಟ್ ಪಡೆದ ಭಕ್ತರು 25 ವರ್ಷಗಳವರೆಗೆ ಪ್ರತಿ ವರ್ಷ ಒಂದು ನಿಗದಿತ ದಿನದಂದು ಭೇಟಿ ನೀಡಬಹುದಾಗಿದ್ದು, ಕಂಪನಿ ಅಥವಾ ಸಂಸ್ಥೆಗಳು ಟಿಕೆಟ್ ಪಡೆದಿದ್ದರೆ ಅದರ ಸಿಂಧುತ್ವದ ಅವಧಿ 20 ವರ್ಷಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಟಿಟಿಡಿ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...