alex Certify BIG NEWS: ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ರೆ ಕ್ಷಮೆಯಾಚಿಸುವೆ ಎಂದ ನಟ ಧನಂಜಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ರೆ ಕ್ಷಮೆಯಾಚಿಸುವೆ ಎಂದ ನಟ ಧನಂಜಯ್

ಬೆಂಗಳೂರು: ಹೆಡ್ ಬುಷ್ ಚಿತ್ರದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧನಂಜಯ್, ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನಂಜಯ್, ಹೆಡ್ ಬುಷ್ ಚಿತ್ರದಲ್ಲಿ ಯಾರಿಗೂ ಅವಮಾನ ಮಾಡಿಲ್ಲ, ಅನಗತ್ಯವಾಗಿ ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ನನಗೆ ವಿಷಾದವಿದೆ. ವೀರಗಾಸೆ ಕಲಾವಿದರಿಗೆ ನಾವು ಯಾವ ಅವಮಾನವನ್ನೂ ಮಾಡಿಲ್ಲ. ಸಿನಿಮಾದಲ್ಲಿರುವ ಶೂ ಧರಿಸಿ ವೀರಗಾಸೆ ಕಲಾವಿದರ ವೇಷ ಧರಿಸಿದ ದೃಶ್ಯ, ಕಾಲಿನಿಂದ ಒದೆಯುವ ದೃಶ್ಯ ತೆಗೆಯುವಂತೆ ಮನವಿ ಬಂದಿದೆ. ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಇನ್ನು ವೀರಗಾಸೆ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆಯಾಚಿಸಿದ ನಟ ಧನಂಜಯ್, ವೀರಗಾಸೆ ಕಲಾವಿದರಿಗೂ ಮಾಸಾಶನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...